ಬಿಜೆಪಿ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಸ್ಪಂದನೆ : ನಳೀನ್ ಕುಮಾರ್ ಕಟೀಲ್
ಅಕ್ಟೋಬರ್ 28, 2022
ಹನೂರು ಕಾಂಗ್ರೆಸ್ ಮುಕ್ತ ಮಾಡಲು ಕರೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಕ್ರಮ, ಜನಪರ ಯೋಜನೆಗಳನ್ನು ತಿಳಿಸುವ ಯಾತ್ರೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಹನೂರು ಪಟ್ಟಣದ ಆರ್.ಎಸ್.ದೊಡ್ಡಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳ ಗೆಲುವು ಪಡೆದುಕೊಂಡು ಸರ್ಕಾರ ರಚನೆ ಮಾಡಲಾಗುವುದು. ಅಧಿಕಾರ ನಡೆಸುವುದು ನಮ್ಮ ಗುರಿಯಲ್ಲ ಜಗತ್ತಿಗೊಂದೇ ಭಾರತ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರ ಮತ್ತು ಜನಪರ ಆಡಳಿತ ನೀಡುತ್ತಿದೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರು ರೈತಪರ ಬಜೆಟ್ ನೀಡಿದ್ದರು. ಹೀಗಾಗಿ ಬಿಜೆಪಿಯನ್ನು ಬೆಂಬಲಿಸಿ ಹನೂರು ತಾಲ್ಲೂಕನ್ನು ಕಾಂಗ್ರೆಸ್ ಮುಕ್ತ ಮಾಡಬೇಕು ಎಂದರು. ಕಾಂಗ್ರೆಸ್ ಭ್ರμÁ್ಟಚಾರದ ಪಿತಾಮಹ ಎಂದು ವಾಗ್ದಾಳಿ ನಡೆಸಿದ ಕಟೀಲ್, ಸಿದ್ದರಾಮಯ್ಯ ಯಾತ್ರೆ ಮಾಡಿಕೊಂಡು ಕ್ಷೇತ್ರ ಹುಡುಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ಎಲ್ಲೂ ಜಾಗ ಇಲ್ಲ ಎಂದರಲ್ಲದೆ, ಕರೊನಾ ಸಂದರ್ಭದಲ್ಲಿ ಯು.ಎಸ್.ಎ ಅಧ್ಯಕ್ಷರು ಭಾರತದಿಂದ ಔಷಧ ಕೇಳಿದ್ದರು, ಕಾಶ್ಮೀರದಲ್ಲಿ ಧ್ವಜ ಹಾರಿಸಲು ಮೋದಿ ಬರಬೇಕಾಯಿತು, ಪಾಕಿಸ್ತಾನದ ಲೋಕಸಭೆಯಲ್ಲಿ ಭಾರತದ ಧ್ವಜ ಹಾರಿಸಿದ್ದಾರೆ. ಇದು ಮೋದಿ ಆಡಳಿತ ಎಂದು ಬಿಜೆಪಿಯ ಗುಣಗಾಣ ಮಾಡಿದರು. ಕಾಂಗ್ರೆಸ್‍ನ ಗರೀಭಿ ಹಟಾವೋದಿಂದ ನೆಹರೂ ಕುಟುಂಬದ ಬಡತನ ಹೋಗಿದೆ, ಬಿಜೆಪಿ 40% ಅಲ್ಲ ಕಾಂಗ್ರೆಸ್ 80% ಸರ್ಕಾರವಾಗಿತ್ತು ಎಂದು ವ್ಯಂಗ್ಯವಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಎಂಎಲ್‍ಸಿ ಮುನಿರಾಜು, ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಮಹೇಶ್ ತೆಂಗಿನಕಾಯಿ, ಸಿದ್ದರಾಜು, ಜಿಲ್ಲಾಧ್ಯಕ್ಷ ಸುಂದರ್, ಮೈ.ವಿ.ರವಿಶಂಕರ್, ವೆಂಕಟಸ್ವಾಮಿ, ಮಾಜಿ ಶಾಸಕರಾದ ಪರಿಮಳನಾಗಪ್ಪ, ನಂಜುಂಡಸ್ವಾಮಿ, ನಿಜಗುಣ ರಾಜು, ಉಪಾಧ್ಯಕ್ಷ ದತ್ತೇಶ್‍ಕುಮಾರ್, ಮಂಗಲ ಶಿವಕುಮಾರ್, ಡಾ.ಪ್ರೀತನ್ ನಾಗಪ್ಪ, ಓಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವೆಂಕಟೇಶ್, ಮಂಡಲ ಅಧ್ಯಕ್ಷ ಸಿದ್ದಪ್ಪ, ವೀರಭದ್ರ ಮತ್ತಿತರಿದ್ದರು.
0 ಕಾಮೆಂಟ್‌ಗಳು