ಕೆವಿಎನ್ ದೊಡ್ಡಿ ಬಳಿ ಚಿರತೆ ಪ್ರತ್ಯಕ್ಷ

 ವರದಿ-ಶಾರುಕ್ ಖಾನ್, ಹನೂರು

ಹನೂರು : ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಕೊಂದು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದ ಚಿರತೆ ತಾಲ್ಲೂಕಿನ ಎಲ್ಲೇಮಾಳದ ಕೆವಿಎನ್ ದೊಡ್ಡಿಯಲ್ಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಿದೆ.
ರಾತ್ರಿ ವೇಳೆ ಸಂಚಾರ ಮಾಡುತ್ತಿದ್ದ ಗ್ರಾಮಸ್ಥರ ಮೊಬೈಲ್ ಕ್ಯಾಮೆರಾದಲ್ಲಿ ರಸ್ತೆ ದಾಟುತ್ತಿರುವ ಚಿರತೆ ಸೆರೆಯಾಗಿದೆ.
ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಅಲ್ಲಲ್ಲಿ ಬೋನುಗಳನ್ನು ಇಟ್ಟಿದ್ದು, ಸಿಸಿ ಕ್ಯಾಮೆರಾ ಕೂಡಾ ಅಳವಡಿಸಿದ್ದರು. ಆದರೆ, ಅರಣಾಧಿಕಾರಿಗಳ ಕ್ಯಾಮೆರಾ ಕಣ್ಣಿಗೆ ಬೀಳದ ಚಿರತೆ ಗ್ರಾಮಸ್ಥರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಎಲ್ಲೇಮಾಳದ ಕೆವಿಎನ್ ದೊಡ್ಡಿಯಲ್ಲಿ ಚಿರತೆ ಓಡಾಟದಿಂದ ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಿದೆ.
ಇತ್ತೀಚೆಗೆ ಗೋವಿಂದಯ್ಯ ಎಂಬ ವೃದ್ಧನನ್ನು ಕೊಂದಿರುವ ಈ ಚಿರತೆ ಜಾನುವಾರುಗಳ ಮೇಲೂ ದಾಳಿ ನಡೆಸಿ ಕೊಂದು ಹಾಕಿತ್ತು. ಹಲವಾರು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿರುವ ಈ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು