ಬಂದೂಕು ಹಿಡಿದು ಕಾಡಲ್ಲಿ ಓಡಾಟ : ಮೂವರ ಬಂಧನ

 ವರದಿ-ಶಾರುಕ್ ಖಾನ್, ಹನೂರು

ಹನೂರು ; ತಾಲ್ಲೂಕಿನ ಆಲಂಬಾಡಿ ಸಮೀಪ ನಾಡ ಬಂದೂಕು ಮತ್ತು ಹೈ ಪ್ರೇಜರ್ ಏರ್‍ಗನ್ ಹಿಡಿದು ಅಕ್ರಮವಾಗಿ ಅರಣ್ಯದಲ್ಲಿ ಪ್ರವೇಶಿಸಿದ ಮೂವರನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಹಿಡಿದು ಪೋಲಿಸರಿಗೆ ಒಪ್ಪಿಸಿರುವ ಘಟನೆ ಹನೂರು ತಾಲ್ಲೂಕಿನ ಸಮೀಪದ ಆಲಂಬಾಡಿಯಲ್ಲಿ ನಡೆದಿದೆ.
ಹೋಗೆನಗಲ್ ಫಾಲ್ಸ್‍ನ ಮಾರಿಮುತ್ತು, ನಲ್ಲಪಟ್ಟಿ ಗ್ರಾಮದ ಕವೀನ್ ಕುಮಾರ್ ಮತ್ತು ಇವರ ಗೆಳೆಯ ವಿಘ್ನೇಶ್ ಬಂಧಿತರು.
ಆರೋಪಿಗಳು ಹನೂರು ತಾಲ್ಲೂಕಿನ ಗಡಿಭಾಗದ ಗೋಪಿನಾಥಂನ ಆಲಂಬಾಡಿ ಗ್ರಾಮದ ಬಳಿ ಬಂದುಕುಗಳನ್ನು ಹಿಡಿದು ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿ ಅನು ಮಾನಾಸ್ಪದವಾಗಿ ಓಡಾಡುತ್ತಿದ್ದನ್ನು ಕಂಡು ಸೆರೆ ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ.
ಈ ಬಗ್ಗೆ ಮಲೆ ಮಹದೇಶ್ವರ ಬೆಟ್ಟದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು