ವಾರದೊಳಗೆ ಕಬ್ಬಿನ ಬೆಲೆ ನಿಗದಿಗೆ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಭರವಸೆ
ಬೆಂಗಳೂರು : ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ನಿಯೋಗ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಗೃಹ ಕಚೇರಿ ಕೃμÁ್ಣದಲ್ಲಿ ಭೇಟಿ ಮಾಡಿ, ಪ್ರಸಕ್ತ ಹಂಗಾಮಿಗೆ ಕಬ್ಬಿನ ದರ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಒಂದು ವಾರದೊಳಗೆ ಕಬ್ಬುದರ ನಿಗದಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ರೈತ ಪ್ರತಿನಿಧಿಗಳ ಸಭೆ ಕರೆಯುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದರೆಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕಬ್ಬುದರ ಪುನರ್ ಪರಿಶೀಲನೆ, ಕೃಷಿ ಪಂಪ್ ಸೆಟ್ ಖಾಸಗಿಕರಣ ವಿರೋಧಿಸಿ ಕಳೆದ 26ರಂದು ಸಹಸ್ರಾರು ರೈತರು ವಿಧಾನಸೌಧ ಛಲೋ ನಡೆಸಲು ಯತ್ನಿಸಿದಾಗ ರೈತರನ್ನ ಬಂಧಿಸಿ ಬಿಡುಗಡೆ ಮಾಡಲಾಗಿತ್ತು, ಅಕ್ಟೋಬರ್ 5 ರ ಒಳಗೆ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ನಿರ್ಲಕ್ಷ ವಹಿಸಿದ ಸರ್ಕಾರದ ನಡವಳಿಕೆ ವಿರುದ್ಧ ಬೇಸತ್ತ ರಾಜ್ಯದ ರೈತ ಮುಖಂಡರುಗಳು ಯಾವುದೇ ಮಾಹಿತಿ ನೀಡದೆ ಇಂದು ಗುಪ್ತವಾಗಿ ಏಕಾಏಕಿ ಮುಖ್ಯಮಂತ್ರಿ ಕಚೇರಿ ಕೃಷ್ಣ ಬಳಿ ಜಮಾಯಿಸಿದ್ದನ್ನು ನೋಡಿ ಪೊಲೀಸರು ದಿಗ್ಭ್ರಮೆಗೊಂಡರು,
ಕಚೇರಿಯ ಮುಂಭಾಗದ ಗೇಟ್ ಬಳಿ ಮೌನವಾಗಿ ನಿಂತು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದ ರೈತರನ್ನು ಕಂಡು, ಮುಖ್ಯಮಂತ್ರಿಗಳು ಕಚೇರಿಗೆ ಕರೆಸಿ 30 ನಿಮಿಷ ಮಾತುಕತೆ ನಡೆಸಿದರು,
ಈ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಟನ್ ಕಬ್ಬಿಗೆ 3,500 ರೂ, ಪಂಜಾಬಿನಲ್ಲಿ 3,800 ರೂ. ಗುಜರಾತ್ ನಲ್ಲಿ 4400 ದರ ನೀಡುತ್ತಿದ್ದಾರೆ, ಕರ್ನಾಟಕದಲ್ಲಿ ನ್ಯಾಯಯುತ ದರ ನಿಗದಿಪಡಿಸಿ ರೈತರಿಗೆ ನ್ಯಾಯ ಕೊಡಿಸಿ, ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಪೊಲೀಸ್ ಬಲದ ಮೂಲಕ ರೈತ ಚಳುವಳಿಯನ್ನು ಹತ್ತಿಕ್ಕುವುದು ಸರ್ಕಾರದ ಆದ್ಯತೆ ಆಗಬಾರದು, ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣ ಮಾಡುವುದನ್ನು ಕೈ ಬಿಡುವಂತೆ ಕೇಂದ್ರಕ್ಕೆ ಪತ್ರ ಬರೆಯಬೇಕು ಎನ್ನುವುದೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು,
ಕಬ್ಬಿಗೆ ಬಳಸುವ ರಸಗೊಬ್ಬರ, ಕೀಟನಾಶಕ, ಡೀಸೆಲ್, ಕಟಾವು ಕೂಲಿ, ಸಾಗಣಿಕೆ ವೆಚ್ಚ, ವಿಪರೀತವಾಗಿ ಎರಿಕೆಯಾಗಿದೆ, ಇದನ್ನು ಪರಿಗಣಿಸಿ ದರ ಹೆಚ್ಚುವರಿ ನಿಗದಿ ಮಾಡಿಸಬೇಕು ಎಂದು ಒತ್ತಾಯಿಸಿದರು.
ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭ ಕಳೆದ ಮೂರು ವರ್ಷಗಳಿಂದ ರೈತರಿಗೆ ಹಂಚಿಕೆಯಾಗುತ್ತಿಲ್ಲ, ರಾಜ್ಯದ 35ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಇಥೆನಾಲ್ ಉತ್ಪಾದನೆ ಮಾಡುತ್ತಿವೆ ಅದರ ಲಾಭ ನೀಡುತ್ತಿಲ್ಲ ಎಂದು ದೂರಿದರು. ಈ ವೇಳೆ ಮುಖ್ಯಮಂತ್ರಿಗಳು ವಾರದೊಳಗೆ ಸಭೆ ದಿನಾಂಕ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಎಂದು ಶಾಂತಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುಸಿದ್ದಪ್ಪ ಕೋಟಗೆ, ಹತ್ತಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಮೇಶ್ ಉಗಾರ್, ದೇವಕುಮಾರ್, ತೇಜಸ್ವಿ ಪಟೇಲ್, ಸುರೇಶ್ ಪಾಟೀಲ್, ಬರ್ಡನಪುರ ನಾಗರಾಜು, ಶಿವನಗೌಡ ಪಾಟೀಲ್, ಯತಿರಾಜ್ ನಾಯ್ಡು, ಬಂಗಾರಿ ಬಸವನಗೌಡ ಸಿದ್ದನಗೌಡ ಮತ್ತಿತರರು ಇದ್ದರು.

0 ಕಾಮೆಂಟ್‌ಗಳು