11 ಗಂಟೆಯಾದರೂ ಅಧಿಕಾರಿಗಳ ನಾಪತ್ತೆ : ಕಚೇರಿಗೆ ಬೀಗ ಜಡಿದ ಗ್ರಾಮಸ್ಥರು
ಅಕ್ಟೋಬರ್ 21, 2022
ನಾಮಕಾವಸ್ಥೆ ಆಡಳಿತ : ಯಾವ ಕೆಲಸವೂ ಆಗುತ್ತಿಲ್ಲ ಎಂಬ ಆರೋಪ
ವರದಿ-ಶಾರುಕ್ ಖಾನ್, ಹನೂರು
ಹನೂರು : ಕಚೇರಿಗೆ ನಿತ್ಯವೂ ತಡವಾಗಿ ಬರುತ್ತಿದ್ದ ಪಿಡಿಒ ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಬೇಸತ್ತ ಗ್ರಾಮಸ್ಥರು ಇಂದು ಪಂಚಾಯ್ತಿಗೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಪಂಚಾಯ್ತಿ ಕೆಲಸಕ್ಕಾಗಿ ತಮ್ಮ ವೈಯುಕ್ತಿಕ ಕೆಲಸಗಳು, ಕೂಲಿ ಬಿಟ್ಟು ಗ್ರಾಮಸ್ಥರು ಕಚೇರಿಗೆ ಬಂದರೆ, 11 ಗಂಟೆಯಾದರೂ ಪಿಡಿಓ ಅಥವಾ ಕಾರ್ಯದರ್ಶಿ ಇತರೆ ಸಿಬ್ಬಂದಿಗಳು ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ಬೇಸತ್ತ ಜನರು ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ನಂತರ ವಿಷಯ ತಿಳಿದು ಪಿಡಿಓ ಕಚೇರಿಗೆ ಧಾವಿಸಿದರಾದರೂ ಮೇಲಧಿಕಾರಿಗಳು ಬರುವ ತನಕ ಬೀಗ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾ ಡಿದ ಗ್ರಾಮಸ್ಥರು, 11 ಗಂಟೆಯಾದರೂ ಒಂದು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಯಾರು ಇಲ್ಲದ ಕಾರಣ ಕಚೇರಿ ಖಾಲಿ ಖಾಲಿ ಹೊಡೆಯುತ್ತಿದೆ. ಆನ ಅಧಿಕಾರಿಗಳಿಗೆ ಕಾಯುತ್ತಿದ್ದಾರೆ. ಇದ್ದಿದ್ದನ್ನು ಕಂಡು ನಾವು ಬೀಗ ಹಾಕಿದ್ದೇವೆ. ಮೇಲಾಧಿಕಾರಿಗಳು ಬರಲಿ, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಕಚೇರಿಗೆ ಅಧಿಕಾರಿಗಳು ನಿಗದಿತ ಸಮಯಕ್ಕೆ ಬಾರದೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಪಂಚಾಯ್ತಿ ಅಧ್ಯಕ್ಷರು ಸದಸ್ಯರಾದಿಯಾಗಿ ಯಾರೂ ತಮ್ಮ ತಮ್ಮ ವಾರ್ಡ್‍ಗಳಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ನಾಲ್ಕನೇ ವಾರ್ಡಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಎಂದು ಪಂಚಾಯಿತಿ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಗ್ರಾಮ ಪಂಚಾಯತಿ ಸದಸ್ಯರುಗಳು ಗ್ರಾಮದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡದೆ ಬರಿ ನಾಮಕಾವಸ್ಥೆಗμÉ್ಟೀ ಸದಸ್ಯರಾಗಿದ್ದಾರೆಂದು ಜನರು ಟೀಕಿಸಿದರು. ವಾಟರ್ ಮ್ಯಾನ್‍ಗಳು ಆಯಾ ವಾರ್ಡ್‍ಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡದೆ ಇಂತಹ ಸಮಸ್ಯೆಗಳು ಬಂದಿವೆ. ಇನ್ನು ಮುಂದೆ ಈ ರೀತಿ ಆಗದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರ ಮೇರೆಗೆ ಸಾರ್ವಜನಿಕರ ಯಾವುದೇ ಕೆಲಸಗಳು ವಿಳಂಬ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ತಿಳಿಸಿದ ನಂತರ ಕಚೇರಿ ಬೀಗವನ್ನು ತೆರೆಯಲಾಯಿತು. ಈ ವೇಳೆ ಸ್ಥಳಕ್ಕೆ ಬಂದ ಪಿಡಬ್ಲ್ಯೂಡಿ ಎಇಇ ಆನಂದ್ ಮೂರ್ತಿ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರು ಸರಬರಾಜು ಮಾಡಲು ಈಗಾಗಲೇ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಪ್ರತಿ ಮನೆ ಮನೆಗೆ ನೀರು ಸರಬರಾಜು ಮಾಡಲು ಪೈಪ್ ಲೈನ್ ಅಳವಡಿಕೆ ಕೆಲಸ ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸಿಂಗಾನಲ್ಲೂರು ಮತ್ತು ಕೊಂಗರಹಳ್ಳಿ ಎರಡು ಗ್ರಾಮ ಪಂಚಾಯ್ತಿ ಕೆಲಸ ನಿರ್ವಹಿಸುತ್ತಿರುವುದರಿಂದ ವಾರಕ್ಕೆ ಮೂರು ದಿನಗಳಂತೆ ಕೆಲಸ ಮಾಡಬೇಕಾಗಿದೆ. ಇಂದು ಸಿಂಗಾನಲ್ಲೂರು ಕಛೇರಿಯಲ್ಲಿ ಕೆಲಸ ಇರುವುದರಿಂದ ಅಲ್ಲಿಗೆ ಹೋಗಿದ್ದೆ, ಇಲ್ಲಿ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಗಲಾಟೆ ಮಾಡುತ್ತಿದ್ದಾರೆಂದು ತಿಳಿದು ಬಂದಿದ್ದೇನೆ. ಸಿಬ್ಬಂದಿಗಳ ತಡವಾಗಿ ಬಂದಿರುವುದರ ಬಗ್ಗೆ ಕ್ರಮ ವಹಿಸಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಪಿಡಿಒ ರೂಪ ತಿಳಿಸಿದರು.
0 ಕಾಮೆಂಟ್‌ಗಳು