ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನೀರು ಪಾಲು

 ವರದಿ-ಶಾರುಕ್ ಖಾನ್, ಹನೂರು

ಹನೂರು : ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ತಾಲೂಕಿನ ಹಳೆ ಮಾರ್ಟಳ್ಳಿ ಸಮೀಪ ನಡೆದಿದೆ. 
ಒಡೆರದೂಡ್ಡಿ ಗ್ರಾಮದ ಮದಲೈ ಮುತ್ತು (35) ಮೃತಪಟ್ಟ ದುರ್ದೈವಿ. 
ಮೀನು ಹಿಡಿದು ಮಾರಿ ತನ್ನ ಜೀವನ ನಡೆಸುತ್ತಿದ್ದ ಮದಲೈ ಮುತ್ತು ಭಾನುವಾರ ಬೆಳಿಗ್ಗೆ ಹಳೇ ಮಾರ್ಟಳ್ಳಿ ಹಾಗೂ ಒಡೆರದೂಡ್ಡಿ ಗ್ರಾಮದ ಸಮೀಪವಿರುವ ಚೆಕ್ ಡ್ಯಾಮ್ ಬಳಿ ಮೀನು ಹಿಡಿಯಲು ಹೋಗಿ ಅಕಸ್ಮಾತ್ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಸ್ಥಳಕ್ಕೆ ಧಾವಿಸಿ ಕೆಲವು ತಾಸುಗಳ ಕಾರ್ಯಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಮೃತ ಮದಲೈ ಮುತ್ತುವಿಗೆ ಪತ್ನಿ ಎರಡು ಚಿಕ್ಕ ಮಕ್ಕಳು ಇದ್ದಾರೆ.

ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರಶಾಂತ್ ನಾಯ್ಕ್, ರವಿ, ನಾಗೇಶ್, ಮುನಿಶಾಂತ್, ಕಾರ್ತಿಕ್, ಗೀರಿಶ್ ಹಾಗೂ ಗೃಹ ರಕ್ಷಕ ಸಿಬಂದಿ ಮಾದೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು