ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಜತೆ ವಾಚೂ, ಸ್ಕ್ಯಾಚೂ ಮತ್ತು ಕ್ಯಾಷೂ : ತನಿಖೆ ನಡೆಸುವಂತೆ ಎಚ್.ವಿಶ್ವನಾಥ್ ಒತ್ತಾಯ
ಅಕ್ಟೋಬರ್ 30, 2022
ಮೈಸೂರು : ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರಕರ್ತರಿಗೆ ಮಿಠಾಯಿಯೊಂದಿಗೆ ಹಣವನ್ನೂ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ವಿಚಾರವಾಗಿ ಸರ್ಕಾರ ಸುಮ್ಮನಾಗದೇ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಒತ್ತಾಯಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಗೆ ಸ್ವೀಟ್ಸ್ ನೀಡಿ ಮಾತನಾಡಿದ ಅವರು, ಪತ್ರಕರ್ತರೊಂದಿಗೆ 40 ವರ್ಷಗಳಿಂದ ಸಂಬಂಧ ಇಟ್ಟುಕೊಂಡಿದ್ದೇನೆ. ಉಡುಗೊರೆಯಾಗಿ ಸ್ವೀಟ್ಸ್, ಹೂ ನೀಡುತ್ತಾ ಬಂದಿದ್ದೇನೆ. ಈಗ ಮುಖ್ಯಮಂತ್ರಿಗಳ ಕಚೇರಿಯಿಂದ ಸ್ವೀಟ್ ಬಾಕ್ಸ್ ಜತೆ ವಾಚೂ, ಸ್ಕ್ಯಾಚೂ ಮತ್ತು ಕ್ಯಾಷೂ ನೀಡಲಾಗಿದೆ. ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಬೇಕು. ಜತೆಗೆ ತಮ್ಮ ಮಾಧ್ಯಮ ಕಾರ್ಯದರ್ಶಿಯನ್ನು ಕೂಡಲೇ ಹೊರಹಾಕಬೇಕೆಂದು ಆಗ್ರಹಿಸಿದರು. ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರಮುಖ ಅಂಗ. ಆ ಅಂಗವನ್ನು ಹಾಳು ಮಾಡುವುದು ಸರಿಯಲ್ಲ. ಬಹಳ ಹೆಸರಿರುವ ಕರ್ನಾಟಕದ ಮಾಧ್ಯಮ ಪ್ರತಿಷ್ಠಿತವಾದದ್ದು. ಅದರ ಗೌರವ, ಪ್ರಖರತೆ, ವ್ಯಕ್ತಿತ್ವ, ಶಕ್ತಿಯನ್ನು ನಾವೇ ಹಾಳು ಮಾಡುತ್ತಿದ್ದೇವೆ0iÉುೀ ಅನಿಸುತ್ತದೆ ಎಂದರು. ಪತ್ರಕರ್ತರಿಗೆ ಆಮಿಷ ಒಡ್ಡಿರುವುದು ಕೇಳಿದರೆ, ಚುನಾವಣೆಗೆ ಈಗಲೇ ಬಂಡವಾಳ ಹೂಡುವುದು ಶುರುವಾಯಿತೇ? ಎಂಬ ಅನುಮಾನ ಕಾಡುತ್ತಿದೆ. ಸಂವಿಧಾನದ ನಾಲ್ಕನೇ ಅಂಗವಾದ ಸತ್ಯವನ್ನು ಕೊಲೆ ಮಾಡಲಿಕ್ಕೆ ಹೋಗುತ್ತಿದ್ದೇವೆ0iÉುೀ ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್‍ನವರು ಹಿಂದೆ ಪತ್ರಕರ್ತರಿಗ ಗಿಫ್ಟ್ ಕೊಟ್ಟಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಖಾಸಗಿಯಾಗಿ ವೈಯಕ್ತಿವಾಗಿ ಉಡುಗೊರೆ ಕೊಟ್ಟಿರಬಹುದು ಎಂದರು. ಸಚಿವ ಎಂಟಿಬಿ ನಾಗರಾಜ್ ಅವರು ಪೆÇಲೀಸ್ ಹುದ್ದೆಗೆ 70ರಿಂದ 80ಲಕ್ಷ ರೂ. ಕೊಟ್ಟಿದ್ದಾರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ ಅವರು, ಭ್ರಷ್ಟಾಚಾರ ಸರ್ಕಾರದಲ್ಲಿ ಮಾತ್ರವಲ್ಲ. ಇಡೀ ವ್ಯವಸ್ಥೆಯಲ್ಲಿ ತುಂಬಿ ತುಳುಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.