ಅಭಿಮಾನಿಗಳಿಂದ ಕೃಷ್ಣರಾಜ ಕ್ಷೇತ್ರದಲ್ಲಿ ಶಾಸಕ ರಾಮ್‍ದಾಸ್ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಣೆ

ಪಾಲಿಕೆ ಸದಸ್ಯೆ ಛಾಯಾ ನವೀನ್ ನೇತೃತ್ವದಲ್ಲಿ ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಪುಸ್ತಕ ವಿತರಣೆ

ಮೈಸೂರು : ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರು ಬುಧವಾರ ಅರ್ಥಪೂರ್ಣವಾಗಿ ಆಚರಿಸಿದರು.
ಬುಧವಾರ ಬೆಳಿಗ್ಗೆ ಶಾಸಕ ರಾಮದಾಸ್ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಈಡುಗಾಯಿ ಹೊಡೆದರು.
ನಂತರ ಅವರು ಕುರುಬಾರಹಳ್ಳಿ ಸ್ಲಂ ನಲ್ಲಿ ವಾಸಿಸುವ ಮಕ್ಕಳಿಗೆ ಬಟ್ಟೆಗಳನ್ನು ವಿತರಿಸಿದರು. ನಂತರ ಅವರು 52ನೇ ವಾರ್ಡ್‍ನಲ್ಲಿ ಮೃಗಾಲಯದ ಎದುರು ನಿರ್ಮಿಸಿದ್ದ ವೇದಿಕೆಯಲ್ಲಿ ತಾಯಂದಿರ ಜತೆ ಹುಟ್ಟುಹಬ್ಬವನ್ನು ಆಚರಿಸಿದರು. ಈ ವೇಳೆ ರಾಮದಾಸ್ ನೂರಾರು ಮಹಿಳೆಯರಿಗೆ ಸೀರೆಗಳನ್ನು ವಿತರಿಸಿ ಅವರಿಂದ ಆಶೀರ್ವಾದ ಪಡೆದರು. ನಂತರ ಅಲ್ಲಿ ಹಾಜರಿದ್ದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.


ಛಾಯಾ ನವೀನ್,

52ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರು
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಛಾಯಾ ನವೀನ್ ಮಾತನಾಡಿ, ಶಾಸಕ ರಾಮದಾಸ್ ಅವರು 52ನೇ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ಸಾಧ್ಯವಾದಷ್ಟು ಅನುದಾನ ಕೊಡಿಸಿದ್ದಾರೆ. ವಾರ್ಡಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಸ್ಪಂದಿಸಿ ಕೆಲಸ ಮಾಡುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ನಾವು ನಮ್ಮ ನೆಚ್ಚಿನ ಶಾಸಕರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ನಮ್ಮ ಶಾಸಕರು ಮಂತ್ರಿಗಳಾಗಬೇಕು ಎಂಬುದೇ ನಮ್ಮ ಅಭಿಲಾಷೆ ಎಂದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ನನ್ನ ಕ್ಷೇತ್ರದ ಕಾರ್ಯಕರ್ತರೇ ನನ್ನ ಬಹುದೊಡ್ಡ ಶಕ್ತಿಯಾಗಿದ್ದಾರೆ. ಈ ದಿನ ನನ್ನ ಕ್ಷೇತ್ರದ ಎಲ್ಲಾ ವಾರ್ಡಿನಲ್ಲೂ ಸದಸ್ಯರು, ಅಭಿಮಾನಿಗಳು, ಪಕ್ಷದ ಮುಖಂಡರು ಪ್ರೀತಿಯಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ತಾಯಂದಿರಿಗೆ 
ಬಟ್ಟೆಗಳನ್ನು ನೀಡುವ ಮೂಲಕ ಅವರ ಆಶೀರ್ವಾದ ಪಡೆದಿದ್ದೇನೆ. ಬಹುತೇಕ ಬಡ ಮಕ್ಕಳು ಪಟಾಕಿ ಹಚ್ಚುವ ಆಸೆ ಇದ್ದರೂ ಬಡತನದ ಕಾರಣದಿಂದ ದೀಪಾವಳಿ ಸಂಭ್ರಮದಿಂದ ವಂಚಿತರಾಗಿದ್ದಾರೆ. ಅವರಿಗೆ ಪಟಾಕಿ ಹಂಚಿದ್ದೇನೆ ಜತೆಗೆ ನೂರಾರು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡುವ ಮೂಲಕ ನನ್ನ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದಾರೆ ಎಂದರು. 
ಬಿಜೆಪಿ ಮುಖಂಡರಾದ ನವೀನ್, ಜನಾರ್ಧನ, ಹೊಯ್ಸಳ, ಜನಾರ್ಧನ, ವಡಿವೇಲು ಮುಂತಾದವರು ಇದ್ದರು.  
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು