ಹನೂರು : ತಾಲ್ಲೂಕಿನ ಎಲ್ಲೆಮಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಡಿ. ಎಂ. ಸಮುದ್ರ (ಗುಳ್ಯ) ಗ್ರಾಮದಲ್ಲಿ ದನಗಳ ಜಾತ್ರೆ ಆರಂಭವಾಗಿದ್ದು, ದನ, ಕರುಗಳ ಖರೀದಿ ಮತ್ತು ಮಾರಾಟ ಜೋರಾಗಿದೆ. ಗ್ರಾಮದ ಮಹದೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಪ್ರತಿ ವರ್ಷ ಶಿವರಾತ್ರಿಯಂದು ನಡೆಯುವ ಈ ಜಾತ್ರೆ ಕಳೆದ 2 ವರ್ಷದಿಂದ ಕೊರೊನ ಕಾರಣದಿಂದ ಸ್ಥಗಿತವಾಗಿತ್ತು. ಈ ಹಿನ್ನೆಲೆ ಈ ಬಾರಿ ಜೋರಾಗಿಯೇ ಜಾತ್ರೆ ಕಟ್ಟಿದ್ದು, ನೂರಾರು ಸಂಖ್ಯೆಯಲ್ಲಿ ದನ ಕರುಗಳೊಂದಿಗೆ ರೈತರು ಆಗಮಿಸಿದ್ದಾರೆ. ಕೊಡು ಕೊಳ್ಳುವಿಕೆ ಹೆಚ್ಚಾಗಿರುವುದು ಕಂಡುಬಂತು. ರೈತರು ಉತ್ಸಾಹದಿಂದ ವ್ಯಾಪಾರದಲ್ಲಿ ಭಾಗವಹಿಸಿದ್ದರು.
0 ಕಾಮೆಂಟ್‌ಗಳು