ಮಹಾನಗರಪಾಲಿಕೆ ಸದಸ್ಯ ಅಶೋಕಾಪುರಂ ಕೃಷ್ಣ ನೇತೃತ್ವದಲ್ಲಿ ಶಾಸಕ ರಾಮ್‍ದಾಸ್ ಹುಟ್ಟುಹಬ್ಬ ಆಚರಣೆ

ನೂರಾರು ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿದ ರಾಮದಾಸ್

ಮೈಸೂರು : ನಗರದ ಅಶೋಕಾಪುರಂ 6ನೇ ಕ್ರಾಸ್‍ನಲ್ಲಿ ಮೈಸೂರು ಮಹಾನಗರಪಾಲಿಕೆ ನಾಮ ನಿರ್ದೇಶನ ಸದಸ್ಯ ಪಿ.ಟಿ.ಕೃಷ್ಣ ನೇತೃತ್ವದಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನೂರಾರು ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕ ರಾಮದಾಸ್ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದರು.
ಈ ವೇಳೆ ಶಾಸಕ ರಾಮದಾಸ್ ಅವರು ಮಾತನಾಡಿ, ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನನಗೆ ದೊಡ್ಡ ಕಾರ್ಯಕರ್ತರ ಪಡೆ ಸಿಕ್ಕಿದೆ. ಅವರ ಸಹಕಾರದಿಂದ ನಾನು ಜನ ಸೇವೆ ಮಾಡುತ್ತಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಅವರು ನೂರಾರು ಶಾಲಾ ಮಕ್ಕಳಿಗೆ ಕೇಕ್ ತಿನ್ನಿಸಿ ಪಟಾಕಿ ಮತ್ತು ನೋಟ್ ಪುಸ್ತಕ ವಿತರಣೆ ಮಾಡಿದರು.

ಮೈಸೂರು ಮಹಾನಗರಪಾಲಿಕೆ ನಾಮ ನಿರ್ದೇಶನ ಸದಸ್ಯ ಪಿ.ಟಿ.ಕೃಷ್ಣ ಮಾತನಾಡಿ, ನಮ್ಮ ನೆಚ್ಚಿನ ಶಾಸಕರಾದ ರಾಮದಾಸ್ ಅವರ ಹುಟ್ಟುಹಬ್ಬ ದೀಪಾವಳಿ ದಿನದಂದೆ ಬಂದಿರುವುದು ನಮಗೆ ಎರಡೆರಡು ಹಬ್ಬಗಳನ್ನು ಏಕಕಾಲಕ್ಕೆ ಆಚರಿಸುವ ಸುಸಂದರ್ಭ ಸಿಕ್ಕಿದೆ. ಇಂದು ನಮ್ಮ ನಾರ್ಡಿನ ಬಹುತೇಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ದಿನ ಎಂದರು. ವಾರ್ಡ್ ಉಸ್ತುವಾರಿ ನಾಗಶಂಕರ್, ವಾರ್ಡ್ ಅಧ್ಯಕ್ಷರಾದ ದೀಪು ಕುಮಾರ್ ಮತ್ತಿತರರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು