ಭಾರತರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ಜನ್ಮದಿನ ಆಚರಣೆ

ಪ್ರಜಾಪ್ರಿಯ ಸೇವಾ ಟ್ರಸ್ಟ್ ನಿಂದ ಕಾರ್ಯಕ್ರಮ

ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ತಾಲೂಕಿನ ಭಾರತೀ ನಗರದ ಪ್ರಜಾಪ್ರಿಯ ಸೇವಾ ಟ್ರಸ್ಟ್ ಕಚೇರಿಯಲ್ಲಿ ಖ್ಯಾತ ವಿಜ್ಞಾನಿ, ಭಾರತರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅವರ 91ನೇ ಜನ್ಮದಿನವನ್ನು ಆಚರಿಸಲಾಯಿತು. 
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಡಾ.ಎಪಿಜೆ ಅಬ್ದುಲ್ ಕಲಾಂ ರವರು ಬಡತನದಲ್ಲಿ ಬೆಳೆದವರು. ಶ್ರೀಮಂತಿಕೆ ಬಂದರೂ ಬೀಗದೆ ಸರಳವಾಗಿ ಜೀವನ ನಡೆಸಿ ಜಗತ್ತಿಗೆ ಮಾದರಿಯಾಗಿದ್ದಾರೆ. ಅಲ್ಲದೇ, ಶೈಕ್ಷಣಿಕವಾಗಿ ಮತ್ತು ವೈಜ್ಞಾನಿಕವಾಗಿ ದೇಶಕ್ಕೆ ಕೊಟ್ಟ ಸಾಧನೆ ಅತ್ಯಾಮೂಲ್ಯವಾದುದ್ದು ಎಂದರು. 
ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘು ವೆಂಕಟೆಗೌಡ ಮಾತನಾಡಿ, ಡಾ.ಎಪಿಜೆ ಅಬ್ದುಲ್ ಕಲಾಂ ರವರು ಮನೆ ಮನೆಗೆ ಪತ್ರಿಕೆಗಳನ್ನು ಹಾಕಿ ದೇಶದ  ಅತ್ಯುನ್ನತ ಹುದ್ದೆಯನ್ನ ಅಲಂಕರಿಸಿ ದೇಶದ ಯುವಕರಿಗೆ ಮಾದರಿಯಾಗಿದ್ದಾರೆ. ಅಲ್ಲದೇ, ವೈಜ್ಞಾನಿಕವಾಗಿ ಕ್ಷಿಪಣಿ ಕಂಡು ಹಿಡಿದು ದೇಶದ ಭದ್ರತೆಗೆ ಸೇವೆ ಸಲ್ಲಿಸಿ ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಿದ್ದಾರೆ. ಅವರ ಸರಳ ಜೀವನ ದೇಶಕ್ಕೆ ಮಾದರಿಯಾಗಿದೆ. ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು ಎಂದರು. 
ಜಿಲ್ಲಾ ಸಮತ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ಗ್ರಾಪಂ ಸದಸ್ಯ ಅಜಯ್, ಅಣ್ಣೂರು ರಂಜಿತ್, ಪವನ್ ಮುಂತಾದವರು ಉಪಸ್ಥಿತರಿದ್ದರು. 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು