ಬಾಯಿ ಆರೋಗ್ಯ ಕುರಿತು ತರಬೇತಿ
ಮೈಸೂರು : ರಾಷ್ಟ್ರೀಯ ಬಾಯಿ ಆರೋಗ್ಯ ಅಭಿಯಾನದಡಿಯಲ್ಲಿ ಬಾಯಿ ಆರೋಗ್ಯದ ಕುರಿತು ತರಬೇತಿ ನೀಡುವ ಕಾರ್ಯಕ್ರಮ ಡಿಟಿಸಿ ಜಿಲ್ಲಾ ತರಬೇತಿ ಕೇಂದ್ರ ಮೈಸೂರು ಇಲ್ಲಿ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಪ್ರಸಾದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿಟಿಸಿ ಪ್ರಾಂಶುಪಾಲರಾದ ಡಾ. ರವಿ ಲಕ್ಷ್ಮಣ, ನೋಡಲ್ ಅಧಿಕಾರಿಗಳಾದ ಡಾ. ಸತ್ಯಪ್ರಕಾಶ್, ಆರ್‍ಸಿಎಚ್ ಅಧಿಕಾರಿಗಳಾದ ಡಾ.ಜಯಂತ್ ಜಿಲ್ಲಾದಂತ ನೋಡಲ್ ಅಧಿಕಾರಿಗಳಾದ ಡಾ.ಅನಿತಾ ಇದ್ದರು.
ಸ್ವಸ್ಥ ಬಾಯಿ, ಸ್ವಸ್ಥ ಶರೀರ ಬಾಯಿಯ ಆರೋಗ್ಯದ ಮೂಲ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಉತ್ತಮ ಜೀವನ ಶೈಲಿಯನ್ನು ನಿರ್ವಹಿಸಲು ಬಾಯಿ ಆರೋಗ್ಯ ಬಹಳ ಮುಖ್ಯ ಎಂದು ಡಿಎಚ್‍ಒ ಪ್ರಸಾದ್ ಹೇಳಿದರು.
ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಕಂಡು ಪ್ರಥಮ ಹಂತದಲ್ಲಿಯೇ ಕಾಯಿಲೆಗೆ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು ಎಂದು ಡಾಕ್ಟರ್ ರವಿ ಸಲಹೆ ನೀಡಿದರು.
ದಂತಭಾಗ್ಯ ಯೋಜನೆಯನ್ನು ಕುರಿತು ಡಾಕ್ಟರ್ ಸತ್ಯ ಪ್ರಕಾಶ್ ರವರು ಮಾತನಾಡಿದರು.
0 ಕಾಮೆಂಟ್‌ಗಳು