ದರಸಗುಪ್ಪೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶಿವಮ್ಮ ದೇವರಾಜು ಅವಿರೋಧ ಆಯ್ಕೆ
ಅಕ್ಟೋಬರ್ 15, 2022
ಉಪಾಧ್ಯಕ್ಷರಾಗಿ ರಾಧಾ ರಜನೀಶ್ ಆಯ್ಕೆ
ಶ್ರೀರಂಗಪಟ್ಟಣ : ದರಸಗುಪ್ಪೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶಿವಮ್ಮ ದೇವರಾಜು ಮತ್ತು ಉಪಾಧ್ಯಕ್ಷರಾಗಿ ರಾಧಾ ರಜನೀಶ್ ಅವಿರೋಧವಾಗಿ ಆಯ್ಕೆಯಾದರು. ಶನಿವಾರ ಇಲ್ಲಿನ ಪಂಚಾಯ್ತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಶಿವಮ್ಮ ಅವರಿಗೆ ಕಾಂಗ್ರೆಸ್ ಪಕ್ಷ ಬೆಂಬಲಿಸಿದ ಕಾರಣ ಅವರ ಅವಿರೋಧ ಆಯ್ಕೆಯಾಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಮೋಹನ್ ಕುಮಾರ್ (ಮುರಳಿ), ಕೆ.ಸಿ.ಮಾದೇಶ್, ಶ್ರೀಧರ್ ಸುಜಯ್, ರಜನಿ ವಿಶ್ವನಾಥ್, ಮುಖಂಡರುಗಳಾದ ಆರ್.ಎನ್.ಗುರುಪ್ರಸಾದ್, ಪ್ರಾಣೇಶ್, ಮಲ್ಲಯ್ಯ, ಮಹಾದೇವ್, ವಿಶ್ವನಾಥ್, ರಾಮಚಂದ್ರ, ಶಿವಮಾದ, ಮಹೇಶ್, ನವೀನ್, ಪ್ರಕಾಶ್, ಸುರೇಶ್, ಕೆಂಪಯ್ಯ, ಚರಣ್, ಸ್ವಾಮೀಗೌಡ ಇದ್ದರು.
0 ಕಾಮೆಂಟ್‌ಗಳು