16 ಲಕ್ಷ ವೆಚ್ಚದಲ್ಲಿ ಪಾರಂಪರಿಕ ಶಾಲಾ ಕಟ್ಟಡ ರಿಪೇರಿಗೆ ಭೂಮಿಪೂಜೆ ಸಲ್ಲಿಸಿದ ಶಾಸಕ ಸಿ.ಎಸ್.ಪುಟ್ಟರಾಜು
ವರದಿ-ನಜೀರ್ ಅಹಮದ್,
ಪಾಂಡವಪುರ : ತಾಲ್ಲೂಕಿನ ಘಟಾನುಘಟಿ ರಾಜಕಾರಣಿಗಳು, ವೈದ್ಯರು, ಶಿಕ್ಷಕರು, ಉಪನ್ಯಾಸಕರನ್ನು ಕೊಡುಗೆಯಾಗಿ ನೀಡಿದ ಪಟ್ಟಣದ ಫ್ರೆಂಚ್‍ರಾಕ್ಸ್ ಶತಮಾನದ ಶಾಲೆ ನವೀಕರಣಗೊಳ್ಳುತ್ತಿದೆ.
ಶಾಸಕ ಸಿ.ಎಸ್.ಪುಟ್ಟರಾಜು ಶಾಲೆ ನವೀಕರಣಕ್ಕೆ ಸುಮಾರು 16 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಸುಮಾರು 125ಕ್ಕೂ ಹೆಚ್ಚು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಶಾಲೆಯ ಮೇಲ್ಚಾವಣಿ ಸೋರುತ್ತಿರುವ ಕಾರಣ ಗೋಡೆಗಳಿಗೆ ನೀರು ಇಳಿದು ಶಾಲೆ ಶಿಥಿಲ ಸ್ಥಿತಿ ತಲುಪಿತ್ತು. ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳೂ ಸೇರಿದಂತೆ ದಾನಿಗಳು ಶಾಲೆ ನವೀಕರಣಕ್ಕೆ ಮುಂದಾಗಿದ್ದರೂ ಕಾರಣಾಂತರದಿಂದ ಕಾಮಗಾರಿ ನಡೆದಿರಲಿಲ್ಲ.
ಕನ್ನಡ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯಿಂದ ಒಟ್ಟು 360ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಹೆಣ್ಣುಮಕ್ಕಳ ಸಂಖ್ಯೆ ಅಧಿಕವಾಗಿದೆ. ಶಾಲೆಯಲ್ಲಿ ಅತ್ಯುತ್ತಮ, ಪ್ರಾಮಾಣಿಕವಾದ ಎಸ್‍ಡಿಎಂಸಿ ರಚನೆಯಾಗಿದ್ದು, ಎಲ್ಲರೂ ಶಾಲೆಯ ಅಭಿವೃದ್ಧಿಯತ್ತ ಗಮನ ಹರಿಸಿರುವುದು ಉತ್ತಮ ಬೆಳವಣಿಗೆ.
ಅತ್ಯುತ್ತಮ ಶಾಲೆ ಮಾಡುತ್ತೇವೆ
ಮಾಕೇಗೌಡ, ಎಸ್‍ಡಿಎಂಸಿ ಅಧ್ಯಕ್ಷ
ಶಿಕ್ಷಣದ ಗುಣಮಟ್ಟ ಉತ್ತಮ
ಫ್ರೆಂಚ್‍ರಾಕ್ಸ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಈ ಕಾರಣದಿಂದ ನಮ್ಮ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿದೆ. ಆದಾಗ್ಯೂ ನಾವು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದೇವೆ, ಹೆಣ್ಣು ಮಕ್ಕಳ ಸಂಖ್ಯೆ ಅಧಿಕವಾಗಿದೆ. ಶೌಚಾಲಯದ ಸಮಸ್ಯೆ ಇದೆ. ಈ ವಿಷಯವನ್ನು ಶಾಸಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶಿಕ್ಷಕರ ಕೊರತೆಯನ್ನು ನೀಗಿಸಿದರೆ ನಾವು ಖಂಡಿತಾ ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡುವಷ್ಟು ಗುಣಮಟ್ಟದ ಶಿಕ್ಷಣ ನೀಡುತ್ತೇವೆ.
ಉತ್ತಮ ಶಿಕ್ಷಕರ ತಂಡವಿದೆ
ನಮ್ಮ ಶಾಲೆಯಲ್ಲಿ ಉತ್ತಮ ಶಿಕ್ಷಕರ ತಂಡವಿದೆ. ಎಲ್ಲರೂ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದಾರೆ. ಶಾಲೆ ನಗರದ ಕೇಂದ್ರ ಸ್ಥಾನದಲ್ಲಿರುವುದೇ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರತಿ ತಿಂಗಳು ನಾವು ಪೋಷಕರ ಸಭೆ ಮಾಡಿ ಮಕ್ಕಳ ಶೈಕ್ಷಣಿಕ ಸಮಸ್ಯೆಗಳು, ಕೊರತೆಗಳ ಬಗ್ಗೆ ಪೋಷಕರ ಜತೆ ಚರ್ಚಿಸುತ್ತೇವೆ. ಸಾಧ್ಯವಾದಷ್ಟು ನಮ್ಮ ಅಗತ್ಯಗಳನ್ನು ಪೋಷಕರ ಸಹಕಾರದಿಂದ ಪೂರೈಸಿಕೊಂಡು ಮಕ್ಕಳ ಶಿಕ್ಷಣಕ್ಕೆ ತಡೆಯಾಗದಂತೆ ಜಾಗರೂಕತೆ ವಹಿಸುತ್ತೇವೆ.
0 ಕಾಮೆಂಟ್‌ಗಳು