ನಂಜನಗೂಡಿನಲ್ಲಿ ಮುಂದುವರಿದ ಕಳ್ಳರ ಕೈಚಳಕ

ಮನೆಯ ಬಾಗಿಲು ಮೀಟಿ ನಗದು, ಚಿನ್ನಾಭರಣ ಕಳವು

ವರದಿ-ಎಚ್.ಎಸ್.ಚಂದ್ರ, ನಂಜನಗೂಡು
ನಂಜನಗೂಡು : ಪಟ್ಟಣದಲ್ಲಿ ಇತ್ತೀಚೆಗೆ ಕೊರಿಯರ್ ಕೊಡುವ ನೆಪದಲ್ಲಿ ಮಹಿಳೆಯನ್ನು ಬೆದರಿಸಿ ಲಕ್ಷಾಂತರ ರೂ. ಚಿನ್ನಾಭರಣ ದೋಚಿದ ಘಟನೆ ಮಾಡುವ ಮುನ್ನವೇ, ಮತ್ತೊಂದು ಕಳವು ಪ್ರಕರಣ ನಡೆದಿದೆ.
ಇಲ್ಲಿನ ರಾಮಸ್ವಾಮಿ ಲೇ ಔಟಿನಲ್ಲಿ ಎರಡು ಮನೆಯಲ್ಲಿ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದು, ಒಂದು ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತು ಸಿಕ್ಕಿಲ್ಲ.  ಶಿಕ್ಷಕ ಮಹೇಶ್ ಎಂಬವರ ಮನೆಯ ಬಾಗಿಲು ಮೀಟಿ 40 ಗ್ರಾಂ ಚಿನ್ನ, 1,500 ರೂ. ನಗದು ಕಳವು ಮಾಡಲಾಗಿದೆ.
ಮನೆಯಲ್ಲಿ ಯಾರು ಇಲ್ಲದ ಸಮಯ ಹೊಂಚು ಹಾಕಿದ ಕಳ್ಳರು ಕೃತ್ಯ ನಡೆಸಿದ್ದಾರೆ.
ನಂಜನಗೂಡಿನಲ್ಲಿ ಇತ್ತೀಚೆಗೆ ಸರಗಳ್ಳತನ ಹಾಗೂ ಮನೆಗಳ್ಳತನ ಹೆಚ್ಚುತ್ತಿದ್ದು ನಾಗರಿಕರು ಭಯದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ. ನಿನ್ನೆ ರಾತ್ರಿ ಬೆಳಗಿನ ತನಕ ಸುರಿದ ಮಳೆಯಲ್ಲಿ ಕಳ್ಳರು ಮನೆಗಳ ಬಾಗಿಲು ಮೀಟಿ ಕಳವು ಮಾಡಿದ್ದಾರೆ.
ಪಿಎಸ್‍ಐ ವಿಜಯರಾಜ್ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳದೊಂದಿಗೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು