ದಲಿತರ ಮನೆಯಲ್ಲಿ ಲಿಂಗಾಯತರ ಹೋಟೆಲ್ ತಿಂಡಿ, ರೆಡ್ ಲೇಬಲ್, ಕಣ್ಣನ್ ದೇವನ್ ಟೀ ಕುಡಿಯುವುದು ಅಸ್ಪøಶ್ಯತೆ ಆಚರಿಸಿದಂತೆ : ವಿಶ್ವನಾಥ್ ಕಿಡಿ
ಅಕ್ಟೋಬರ್ 22, 2022
ದಲಿತರ ಮನೆಯಲ್ಲಿ ಊಟ ಎಂಬ ನಾಟಕವನ್ನು ನಿಲ್ಲಿಸಿ
ಮೈಸೂರು : ರಾಜ್ಯದಲ್ಲಿ ವಿವಿಧ ಪಕ್ಷಗಳ ಮುಖಂಡರಿಂದ ದಲಿತರ ಮನೆಯಲ್ಲಿ ಊಟ ಎಂಬ ನಾಟಕ ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದ್ದು, ಇದೂ ಕೂಡ ಅಸ್ಪøಶ್ಯತೆ ಆಚರಣೆಯ ಒಂದು ಭಾಗವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಕಿಡಿ ಕಾರಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ದಲಿತರ ಮನೆಯಲ್ಲಿ ಲಿಂಗಾಯತರ ಹೋಟೆಲ್ ತಿಂಡಿ ತಂದು ತಿಂದಿದ್ದಾರೆ. ಯಾಕೆ ದಲಿತರು ತಿನ್ನುವುದನ್ನೇ ನೀವೇಕೆ ತಿನ್ನಲಿಲ್ಲ. ಒಬ್ಬರು ಊಟ ಮಾಡುವವರು ಮತ್ತೊಬ್ಬರು ಯಾವ ತಿಂಡಿ ಮಾಡುತ್ತಿದ್ದೀರಿ ಎಂದು ಕೇಳುವವರು. ರೆಡ್ ಲೇಬಲ್, ಕಣ್ಣನ್ ದೇವನ್ ಟೀ ಕುಡಿಯಲು ದಲಿತರ ಮನೆಗೇ ಹೋಗಬೇಕಾ? ಯಾರು ನಿಮ್ಮನ್ನು ಕರೆದಿದ್ದು, ನೀವಾಗೇ ಬಂದಿದ್ದೀರಿ ಅಂದಮೇಲೆ ಮನೆಯಲ್ಲಿ ಏನಿದೇ ಅದನ್ನು ತಿನ್ನಿ. ಅದನ್ನು ಬಿಟ್ಟು ದಲಿತರ ಮನೆಯಲ್ಲಿ ಹೋಟೆಲ್ ತಿಂಡಿ ತಿನ್ನುವುದೂ ಕೂಡ ಆಸ್ಪøಶ್ಯತೆ ಆಚರಣೆಯ ಒಂದು ಭಾಗ ಎಂದರು. ದಲಿತರದು ಖಾಸಗಿ ಬದುಕಿದೆ. ಅವರನ್ನು ಅವಮಾನ ಮಾಡಬೇಡಿ, ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ ಎಂದು ಹೇಳಿದರು. ದಲಿತರ ಬಗ್ಗೆ ಪ್ರೀತಿ ಇದ್ದರೆ ಅವರ ಶ್ರೇಯೋಭಿವೃದ್ಧಿಗೆ ಒಂದು ಕಾರ್ಯಕ್ರಮ ರೂಪಿಸಿಕೊಂಡು ಅವರ ಮನೆಗೆ ಹೋಗಿ. ಇದನ್ನೆಲ್ಲಾ ಯಶೋದರಮ್ಮ ದಾಸಪ್ಪ ಅವರ ಜೀವನ ಚರಿತ್ರೆಯನ್ನು ಓದಿ ತಿಳಿದುಕೊಳ್ಳಿ ಎಂದರು.
0 ಕಾಮೆಂಟ್‌ಗಳು