ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಜೈಲಿಗಟ್ಟಿದ ಪೊಲೀಸರು
ಅಕ್ಟೋಬರ್ 22, 2022
ಹೊಳೆ ನರಸೀಪುರ ತಾಲ್ಲೂಕು ಹಳ್ಳಿ ಮೈಸೂರು ಗ್ರಾಮದಲ್ಲಿ ಘಟನೆ
ವರದಿ-ವಸಂತಯ್ಯ, ಹೊಳೆ ನರಸೀಪುರ
ಹೊಳೆ ನರಸೀಪುರ : ತಾಲೂಕಿನ ಹಳ್ಳಿ ಮೈಸೂರು ಗ್ರಾಮದಲ್ಲಿ ಮಧ್ಯ ವ್ಯಸನಿಯೊಬ್ಬ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಘಟನೆ ನಡೆದಿದೆ. ಹಳ್ಳಿ ಮೈಸೂರ್ ಗ್ರಾಮದ ಕಡಲೆಕಾಯಿಯ ಕೃಷ್ಣ ಎಂಬಾತನೇ ರಂಪಾಟ ನಡೆಸಿದ ವ್ಯಕ್ತಿಯಾಗಿದ್ದು, ಪೊಲೀಸರು ಈತನನ್ನು ಬಂಧಿಸಿ ಜೈಟಿಗಟ್ಟಿದ್ದಾರೆ. ಗ್ರಾಮದ ಮಹದೇಶ್ವರ ಕಾಲೋನಿಯ ಪರಮೇಶ್ ಎಂಬುವರ ಮೇಲೆ ಈತ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ವೀಡಿಯೋ ಈಗ ಪಟ್ಟಣದಾದ್ಯಂತ ವೈರಲ್ ಆಗಿದ್ದು, ಪರಮೇಶ್ ಹಳ್ಳಿ ಮೈಸೂರು ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಡಲೇಕಾಯಿ ಕೃಷ್ಣನ ವಿರುದ್ಧ ಎಫ್ ಐ ಆ ರ್ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿ ಅಸಭ್ಯವಾಗಿ ವರ್ತಿಸಿರುವ ಕೃಷ್ಣ ಎಂಬಾತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿವಿಧ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
0 ಕಾಮೆಂಟ್‌ಗಳು