ಮಳೆ ಆರ್ಭಟ : ಕೋಡಿ ಬಿದ್ದ ಯಲಾದಹಳ್ಳಿ ಕೆರೆ, ಜಮೀನಿಗೆ ನುಗ್ಗಿದ ನೀರು

ಲಕ್ಷಾಂತರ ಮೌಲ್ಯದ ಬೆಳೆ ಹಾನಿ, ಜಮೀನು ನಾಶ 

ವರದಿ-ಟಿ.ಸಿ.ಸಂತೋಷ, ಮದ್ದೂರು

ಮದ್ದೂರು : ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನ ಯಲಾದಹಳ್ಳಿ ಗ್ರಾಮದಲ್ಲಿ ಸುಮಾರು 40 ವರ್ಷಗಳ ಬಳಿಕ ಕೆರೆ ತುಂಬಿ ಕೊಡಿ ಬಿದ್ದು, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ. 
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಕೆರೆಯಲ್ಲಿ ಸಂಗ್ರಹವಾಗಿ ಕೆರೆಯು ಅಪಾಯದ ಮಟ್ಟ ಮೀರಿ ತುಂಬಿ ಕೊಡಿ ಬಿದ್ದು, ಸುಮಾರು 50 ಎಕರೆ ಜಮೀನಿನಲ್ಲಿದ್ದ ಬೆಳೆಗಳು ಸಂಪೂರ್ಣ ನಾಶಗೊಂಡು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.


ಸುಮಾರು 30 ಎಕರೆ ಭತ್ತದ ಬೆಳೆ, ಕಟಾವಿಗೆ ಬಂದ ಕಬ್ಬು ಹಾಗೂ 10 ಎಕರೆ ತೆಂಗು ಹಾಗೂ ಸೀಮೆ ಹುಲ್ಲಿನ ಗದ್ದೆಗಳು ಮಳೆ ಹಾನಿಯಿಂದ ಸಂಪೂರ್ಣವಾಗಿ ನಾಶಗೊಂಡಿದೆ 
ಪರಿಹಾರಕ್ಕಾಗಿ ಒತ್ತಾಯ : ಮಳೆ ಹಾನಿಯಿಂದ ರೈತರು ಬೆಳೆದ ಬೆಳೆಯೂ ಸಂಪೂರ್ಣ ನಾಶಗೊಂಡಿರುವ ರೈತರಿಗೆ ತಾಲೂಕು ಆಡಳಿತ ಸರ್ಕಾರದಿಂದ ಪರಿಹಾರ ಕೊಡಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು