ಹನೂರು : ತಾಲೂಕಿನ ಅಜ್ಜೀಪುರದ ಆಂಜನೇಯ ದೇವಸ್ಥಾನದ ಕಣಿವೆ ಹತ್ತಿರ ಲಾರಿಯೊಂದು ಕುರಿಗಳ ಮೇಲೆ ಹರಿದ ಪರಿಣಾಮ ಎರಡು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ತಮಿಳುನಾಡಿನ ಸೇಲಂಗೆ ಕರಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಎರಡು ಕುರಿಗಳ ಮೇಲೆ ಹರಿದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಂದು ಕುರಿ ಗಂಭೀರವಾಗಿ ಗಾಯಗೊಂಡಿದ್ದು, ಗ್ರಾಮಸ್ಥರು ಸ್ಥಳದಲ್ಲಿ ಸೇರಿ ಪಂಚಾಯ್ತಿ ನಡೆಸಿ ಕುರಿ ಮಾಲಿಕ ಕಾಂತರಾಜು ಅವರಿಗೆ ನಷ್ಟವನ್ನು ಕೊಡಿಸಿದರು.
0 ಕಾಮೆಂಟ್‌ಗಳು