ವಿದ್ಯುತ್ ಅವಘಡ : ಹಾಸಿಗೆ ಅಂಗಡಿ ಭಸ್ಮ, ಡೆಂಟಲ್ ಕ್ಲೀನಿಕ್‍ಗೂ ಬೆಂಕಿ
ಅಕ್ಟೋಬರ್ 15, 2022
ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ, ತಪ್ಪಿದ ಹೆಚ್ಚಿನ ಅನಾಹುತ, 20 ಲಕ್ಷ ರೂ. ನಷ್ಟ
ಮೈಸೂರು : ವಿದ್ಯುತ್ ಅವಘಡದಿಂದ ಹಾಸಿಗೆ ಅಂಗಡಿ ಸುಟ್ಟು ಭಸ್ಮವಾದ ಘಟನೆ ಮೈಸೂರಿನ ಅಶೋಕಾ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ನಗರದ ಸವಾವುದ್ದೀನ್ ಎಂಬವರಿಗೆ ಸೇರಿದ ಹಿಂದೂಸ್ತಾನ್ ಬೆಡ್ಡಿಂಗ್ ಸೆಂಟರ್‍ಗೆ ಇಂದು ಬೆಳಿಗ್ಗೆ 6 ಗಂಟೆಗೆ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹತ್ತಿಕೊಂಡಿತು ಎನ್ನಲಾಗಿದೆ. ಬೆಂಕಿ ಹತ್ತಿಕೊಂಡಾಗ ಅಂಗಡಿ ಬಾಗಿಲು ಮುಚ್ಚಿತ್ತು.
ಸಾರ್ವಜನಿಕರು ರೋಲಿಂಗ್ ಶಟರ್ ಒಡೆದು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿ ಅಗ್ನಿಶಾಮಕ ತಂಡದವರು ಪ್ರಯಾಸದಿಂದ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಈ ವೇಳೆ ಸುಮಾರು 15 ಲಕ್ಷ ರೂ. ಮೌಲ್ಯದ ಹತ್ತಿ ಮತ್ತು ಹಾಸಿಗೆ, ಬಟ್ಟೆಗಳು ಸುಟ್ಟು ಕರಕಲಾದವು.
ಬೆಂಕಿಯ ಕೆನ್ನಾಲಿಗೆ ಕಟ್ಟಡದ ಮೊದಲನೇ ಮಹಡಿಯಲ್ಲಿದ್ದ ಡಾ.ಬಾಲಾಜಿ ಸಿಂಗ್ ಅವರಿಗೆ ಸೇರಿದ ಬಾಲಾಜಿ ಡೆಂಟಲ್ ಕ್ಲೀನಿಕ್‍ಗೂ ತಗುಲಿ ಅಲ್ಲಿಯೂ ಟಿವಿ, ಯುಪಿಎಸ್, ಪೀಠೋಪಕರಣ ಇನ್ನಿತರ ವೈದ್ಯಕೀಯ ಉಪಕರಣಗಳು ಬೆಂಕಿಗಾಹುತಿಯಾಗಿ 5 ಲಕ್ಷ ರೂ. ನಷ್ಟ ಸಂಭವಿಸಿದೆ.
0 ಕಾಮೆಂಟ್‌ಗಳು