ಅಂಬಿಗರಹಳ್ಳಿ ಕುಂಭಮೇಳಕ್ಕೆ ಮಹದೇಶ್ವರಬೆಟ್ಟದಿಂದ ಹೊರಟ ಮಹದೇಶ್ವರ ಜ್ಯೋತಿ ಯಾತ್ರೆಗೆ ಚಾಲನೆ
ವರದಿ ಶಾರುಕ್ ಖಾನ್ ಹನೂರು
ಹನೂರು : ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರಜ್ಯೋತಿ ಯಾತ್ರೆಗೆ ಇಂದು ಚಾಲನೆ ನೀಡಲಾಯಿತು.
ಸಚಿವರಾದ ಗೋಪಾಲಯ್ಯ, ನಾರಾಯಣ ಗೌಡ, ಶಾಸಕ ಆರ್.ನರೇಂದ್ರ, ಕಾಡಾ ಅಧ್ಯಕ್ಷ ಜಿ.ನಿಜಗುಣ ರಾಜು, ಸಾಲೂರು ಶ್ರೀಗಳು ಮಹದೇಶ್ವರಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.
ಮಹದೇಶ್ವರ ಜ್ಯೋತಿ ಯಾತ್ರೆಯು ಗುರವಾರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೊರಟಿತು. ಹನೂರು-ಕೊಳ್ಳೇಗಾಲ-ಮರಡಿಗುಡ್ಡ (ವಿಶೇಷ ಪೂಜೆ) ಬನ್ನೂರು-ಬೆಳವಾಡಿ-ಪಾಲಳ್ಳಿ ಬೆಳಗೋಳ-ಕೆಆರ್‍ಎಸ್ ಕನ್ನಂಬಾಡಿ-ವೇಣುಗೋಪಾಲಸ್ವಾಮಿ ಡಿಂಕಾ ಬಲ್ಲೇನಹಳ್ಳಿ ಮಾರ್ಗವಾಗಿ ಸಂಚರಿಸಿ ಕಲ್ಲಹಳ್ಳಿ ಭೂ ವರಾಹನಾಥ ಸ್ವಾಮಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ.
ಅ.7 ರಂದು ಬೆಳಿಗ್ಗೆ ಕಲ್ಲಹಳ್ಳಿ ಭೂ ವರಾಹನಾಥ ಸ್ವಾಮಿ ದೇವಸ್ಥಾನದಿಂದ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಗಳು- ಭೂಕನಕೆರೆ ಗ್ರಾಮ ಪಂಚಾಯಿತಿ ಗ್ರಾಮಗಳು- ತೆಂಡೆಕೆರೆ -ಶೀಳನೆರೆ ಮಾರ್ಗವಾಗಿ ಸಂಚರಿಸಿ ಶೀಳನೆರೆಯಲ್ಲಿ ವಾಸ್ತವ್ಯ ಹೂಡಲಿದೆ.
ಅ.8 ರಂದು ಬೆಳಿಗ್ಗೆ ಶೀಳನೆರೆಯಿಂದ ಸಿಂಧಘಟ್ಟ- ಹರಳಹಳ್ಳಿ -ಚೌಡೇನಹಳ್ಳಿ -ಮಾಕಾವಳ್ಳಿ ಬಂಡಿಹೊಳೆ ಮಾರ್ಗವಾಗಿ ಸಂಚರಿಸಿ ಬಂಡಿ ಹೊಳೆಯಲ್ಲಿ ವಾಸ್ತವ್ಯ ಹೂಡಲಿದೆ. ಅ.9 ರಂದು ಬಂಡಿಹೊಳೆಯಿಂದ ಹರಿಹರಪುರ- ಮಡುವಿನ ಕೋಡಿ -ಬಳ್ಳೇಕೆರೆ- ಐಚನಹಳ್ಳಿ ಮಾರ್ಗವಾಗಿ ಸಂಚರಿಸಿ ಗಂಜಿಗೆರೆಯಲ್ಲಿ ವಾಸ್ತವ್ಯ ಹೂಡಲಿದೆ. ಅ.10 ರಂದು ಬೆಳಿಗ್ಗೆ ಗಂಜಿಗೆರೆ ಭಾರತಿಪುರ ಕ್ರಾಸ್-ಅಘಲಯ- ಸಂತೆ ಬಾಚನಹಳ್ಳಿ-ರಂಗನಾಥಪುರ ಕ್ರಾಸ್ -ಸಾರಂಗಿ ಮಾರ್ಗವಾಗಿ ಸಂಚರಿಸಿ ಆಗ್ರಹಾರ ಬಾಚಹಳ್ಳಿ ಯಲ್ಲಿ ವಾಸ್ತವ್ಯ ಹೂಡಲಿದೆ.
ಅ.11ರಂದು ಬೆಳಿಗ್ಗೆ ಆಗ್ರಹಾರ ಬಾಚಹಳ್ಳಿಯಿಂದ ಕಿಕ್ಕೇರಿ-ಲಕ್ಷ್ಮಿಪುರ-ಆನೆಗೋಳ- ಮಾದಾಪುರ-ದಬ್ಬೆಘಟ್ಟ ಮಾರ್ಗವಾಗಿ ಸಂಚರಿಸಿ ಐಕನಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದೆ. ಅ.12ರಂದು ಬೆಳಿಗ್ಗೆ ಹೈಕನಹಳ್ಳಿಯಿಂದ ಬೀರುವಳ್ಳಿ- ಹಿರಿಕಳಲೆ -ಮಂದಗೆರೆ ಮಾರ್ಗವಾಗಿ ಸಂಚರಿಸಿ ಕೆ ಆರ್ ಪೇಟೆಯಲ್ಲಿ ವಾಸ್ತವ್ಯ ಹೂಡಲಿದೆ. ಅ.13ರಂದು ಬೆಳಿಗ್ಗೆ ಕೆ ಆರ್ ಪೇಟೆ ಟೌನ್ ಮಾರ್ಗವಾಗಿ ಸಂಚರಿಸಿ ತ್ರಿವೇಣಿ ಸಂಗಮದಲ್ಲಿ ವಾಸ್ತವ್ಯ ಹೂಡಲಿದೆ.
ಭಕ್ತಾಧಿಗಳು ಜ್ಯೋತಿ ಯಾತ್ರೆಯಲ್ಲಿ ಹಾಗೂ ಅ. 14 ರಿಂದ 16 ರವರೆಗೆ ಕೆ.ಆರ್.ಪೇಟೆಯ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯಲಿದೆ.
0 ಕಾಮೆಂಟ್‌ಗಳು