ಭಾರತ್ ಜೋಡೋ ಪಾದಯಾತ್ರೆಯಲ್ಲಿ ತಾಯಿ ಸೋನಿಯಾ ಗಾಂಧಿ ಕಾಲಿನ ಶೂ ಲೇಸ್ ಹಾಕಿದ ರಾಹುಲ್

ತಾಯಿಯ ಬಗ್ಗೆ ಕಾಳಜಿ ಇರುವವರು ತಾಯಿನಾಡಿನ ಬಗ್ಗೆಯೂ ಇನ್ನೂ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದ ನೆಟ್ಟಿಗರು

ಪಾಂಡವಪುರು : ಕಾಂಗ್ರೆಸ್ ಪಕ್ಷದ ಐತಿಹಾಸಿಕ ಭಾರತ್ ಜೋಡೋ ಪಾದಯಾತ್ರೆ ಭಾರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ, ಪಾದಯಾತ್ರೆ ನಡುವೆ ರಾಹುಲ್ ಗಾಂಧಿಯ ಸಭ್ಯ ನಡವಳಿಕೆಯೂ ಜನಮನ್ನಣೆ ಗಳಿಸುತ್ತಿದೆ.
ತಮಿಳುನಾಡಿನ ಕನ್ಯಾಕುಮಾರಿಯಿಂದ ಹೊರಟ ಪಾದಯಾತ್ರೆ ಕೇರಳ ಮೂಲಕ ಕರ್ನಾಟಕ ತಲುಪಿದೆ. ಈ ನಡುವೆ ನೂರಾರು ಮೈಲಿ ಸಾಗಿರುವ ರಾಹುಲ್ ದಾರಿಯಲ್ಲಿ ಹಲವಾರು ವೃದ್ಧರು, ಮಕ್ಕಳು, ಮಹಿಳೆಯರು, ರೈತರು, ಅಂಗವಿಕಲರು, ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಮೈಸೂರಿನಲ್ಲಿ ಭಾರಿ ಮಳೆಯ ನಡುವೆ ರಾಹುಲ್ ಗಾಂಧಿ ಭಾಷಣ ಮಾಡುತ್ತಿರುವ ದೃಶ್ಯ ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ಗುರುವಾರ ರಾಹುಲ್ ಗಾಂಧಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನ್ಯಾಮನಹಳ್ಳಿ ಗ್ರಾಮದ ಬಳಿ ಪಾದಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲಿ ತಾಯಿ ಸೋನಿಯಾ ಗಾಂಧಿ ಅವರ ಕಾಲಿ ಶೂ ಲೇಸ್ ಬಿಚ್ಚಿಕೊಂಡಿತ್ತು. ಇದನ್ನು ಗಮನಿಸಿದ ರಾಹುಲ್ ಗಾಂಧಿ ತಾಯಿಯ ಕಾಲಿನ ಶೂಲೇಸ್ ಕಟ್ಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದಲ್ಲದೇ ಪ್ರಶಂಸೆಗೂ ಪಾತ್ರವಾಗಿದೆ.
ನೆಟ್ಟಿಗರೊಬ್ಬರು ಈ ಚಿತ್ರಕ್ಕೆ `ತಾಯಿಯ ಬಗ್ಗೆ ಕಾಳಜಿ ಇರುವವರು ತಾಯಿನಾಡಿನ ಬಗ್ಗೆಯೂ ಇನ್ನೂ ಹೆಚ್ಚು ಕಾಳಜಿ ವಹಿಸುತ್ತಾರೆ’ ಎಂದಿರುವುದು ಗಮನಾರ್ಹವಾಗಿದೆ. 
    



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು