ಮಧುವನ ಹಳ್ಳಿ ಗ್ರಾಮದಲ್ಲಿ ಬೈಕ್‍ನಿಂದ ಬಿದ್ದು ತೀವ್ರವಾಗಿ ಗಾಯಗೊಂಡ ಮಹಿಳೆ : ಆಂಬುಲೆನ್ಸ್ ಇಲ್ಲದೆ ಪರದಾಟ
ವರದಿ ಶಾರುಕ್ ಖಾನ್ ಹನೂರು
ಹನೂರು ; ಮಹಿಳೆಯೊಬ್ಬರು ಅಕಸ್ಮಾತ್ ಬೈಕ್‍ನಿಂದ ಬಿದ್ದು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಧುವನ ಹಳ್ಳಿ ಗ್ರಾಮದ ಹತ್ತಿರ ನಡೆದಿದ್ದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ಪರದಾಡಬೇಕಾಯಿತು.
ಬೂದಬಾಳು ಗ್ರಾಮದ ಗುಂಡಮ್ಮ ಗಾಯಗೊಂಡವರು. ಕೊಳ್ಳೆಗಾಲದಿಂದ ಬೂದಬಾಳಿಗೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭ ಅಕಸ್ಮಾತ್ ಬೈಕ್‍ನಿಂದ ಬಿದ್ದ ಗುಂಡಮ್ಮ ತೀವ್ರವಾಗಿ ಗಾಯಗೊಂಡರು. ಈ ವೇಳೆ 108 ಆಂಬುಲೆನ್ಸ್‍ಕೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ತಕ್ಷಣ ಅಲ್ಲಿದ್ದ ಜನರು ದಾರಿಯಲ್ಲಿ ಹೋಗುತ್ತಿದ್ದ ಆಟೋ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಅದೇ ಆಟೋ ಮೂಲಕ ಗಾಯಾಳು ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೆಗಾಲದ ಆಸ್ಪತ್ರೆಗೆ ಸಾಗಿಸಿ ಆಕೆಯ ಪ್ರಾಣ ಉಳಿಸುವಲ್ಲಿ ನೆರವಾದರು.
ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಾರದ ಕಾರಣ ಮಧುವನ ಹಳ್ಳಿ ಗ್ರಾಮಸ್ಥತು ಆಕ್ರೋಶ ವ್ಯಕ್ತಪಡಿಸಿದರು.
0 ಕಾಮೆಂಟ್‌ಗಳು