ನಿರ್ಮಾಣವಾದ 23 ವರ್ಷಕ್ಕೆ ಉದುರುತ್ತಿರುವ ಕಾಂಕ್ರಿಟ್
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಪೊನ್ನಾಚಿ ವ್ಯಾಪ್ತಿಯ ಕಾಡಂಚಿನ ಮರೂರು ಗ್ರಾಮದಲ್ಲಿ 23 ವರ್ಷಗಳ ಹಿಂದೆ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಕಳಪೆ ಕಾಮಗಾರಿ ಕಾರಣ ಕುಸಿಯುವ ಹಂತ ತಲುಪಿದೆ.
1999ರಲ್ಲಿ ನಿರ್ಮಾಣ ಗೊಂಡ 50,000 ಲೀಟರ್ ಸಾಮಥ್ರ್ಯದ ಈ ಟ್ಯಾಂಕ್ ಕಾಮಗಾರಿ ತೀರ ಕಳಪೆಯಾಗಿದ್ದು, ಟ್ಯಾಂಕಿನ ಪಿಲ್ಲರ್‍ಗಳಲ್ಲಿನ ಸೀಮೆಂಟ್ ಉದುರಿ ಕಬ್ಬಿಣ ತುಕ್ಕು ಹಿಡಿದು ಯಾವುದೇ ಸಮಯದಲ್ಲಿ ಕೆಳಕ್ಕೆ ಭೀಳುವ ಸಾಧ್ಯತೆ ಇದೆ. ಟ್ಯಾಂಕ್ ಕಟ್ಟುವಾಗ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಇದಕ್ಕೆ ಗುತ್ತಿಗೆದಾರ ಮತ್ತು ಎಂಜಿನಿಯರ್ ಅವರನ್ನು ಹೊಣೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟ್ಯಾಂಕ್ ಪಕ್ಕದಲ್ಲೇ ಶಾಲೆ ಇರುವ ಕಾರಣ ಮಕ್ಕಳು ಇಲ್ಲಿ ಆಟವಾಡಲು ಬರುತ್ತಾರೆ. ಅಸುಪಾಸಿನಲ್ಲೇ ದೇವಸ್ಥಾನವಿದೆ. ಹಲವಾರು ಮನೆಗಳೂ ಸಹ ಇದ್ದು, ಪಕ್ಕದಲ್ಲೇ 11000 ಕೆವಿ ಸಾಮಥ್ರ್ಯದ ವಿದ್ಯುತ್ ಟಿಸಿ ಕೂಡ ಇದೆ. ಇದರಿಂದ ಮತ್ತಷ್ಟು ದೊಡ್ಡ ಮಟ್ಟದ ಅಪಾಯವೂ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ಅಪಾಯ ಎದುರಾದರೂ ಇದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೊಣೆಯಾಗುತ್ತಾರೆ. ಅಮಾಯಕರ ಪ್ರಾಣಕ್ಕೆ ಸಂಚಾಕಾರ ತರುವ ಸಾಧ್ಯತೆ ಹೆಚ್ಚಾಗಿರುವ ಈ ಟ್ಯಾಂಕ್‍ನಿಂದ ಜನರನ್ನು ರಕ್ಷಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.