ನಕಲಿ ದಾಖಲೆ ಸೃಷ್ಟಿಸಿ ಮೂಡಾಕ್ಕೆ ಪಂಗನಾಮ
ಮೈಸೂರು : ಬೇರೊಬ್ಬರ ಜಮೀನಿಗೆ ನಕಲಿ ದಾಖಲೆ ಸೃಷ್ಠಿಸಿ ಮೂಡಾ ಮತ್ತು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಹಣ ಪಡೆದು ವಂಚಿಸಿದ್ಧ ಆರು ಮಂದಿ ವಿರುದ್ಧ ನಗರದ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಪುಟ್ಟಬುದ್ಧಿ, ಪುಷ್ಪ, ಲಿಂಗಣ್ಣ, ಮಹದೇವ ಮತ್ತು ಇವರಿಗೆ ಸಹಕರಿಸಿದ ಮುಡಾ ಅಧಿಕಾರಿ ಹರ್ಷವರ್ಧನ್ ಹಾಗೂ ವಕೀಲ ಎಂ.ರಾಜೇಶ್ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 73/2022ರ ಪ್ರಕಾರ ಭಾರತೀಯ ದಂಡಸಂಹಿತೆ 416, 419, 420, ಹಾಗೂ ಕಲಂ 406ರಡಿ ಪ್ರಕರಣ ದಾಖಲಾಗಿದೆ.
ಕೆಂಪಮ್ಮ ಎಂಬುವವರ ಜಮೀನಿಗೆ ನಕಲಿ ದಾಖಲೆ ಸೃಷ್ಠಿಸಿ ಆರೋಪಿಗಳು ಮುಡಾದಿಂದ 98,33,862 ರೂ. ಹಣವನ್ನ ಪಡೆದು ವಂಚಿಸಿದ್ದರು. ಈ ಸಂಬಂಧ ಕೆಂಪಮ್ಮ ದೂರು ನೀಡಿದ್ದರು. ಈ ನಡುವೆ 1ನೇ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅಶೋಕಪುರಂ ಪೊಲೀಸ್ ಠಾಣೆಗೆ ಸೂಚನೆ ನೀಡಿತ್ತು. ಅದರಂತೆ ಇದೀಗ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು