ಅಂಗವಿಕಲರಿಗೆ ಕೃತಕ ಕಾಲು ವಿತರಿಸುವ ಮೂಲಕ ಶಾಸಕ ರಾಮದಾಸ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್
ಅಕ್ಟೋಬರ್ 27, 2022
ಮೈಸೂರು : ಒಂದು ಕಾಲನ್ನು ಕಳೆದುಕೊಂಡಿದ್ದ ಅಂಗವಿಕಲ ಲೋಕೇಶ್ ಎಂಬವರಿಗೆ ಕೃತಕ ಕಾಲು ವಿತರಿಸುವ ಮೂಲಕ ಮೈಸೂರು ಮಹಾನಗರಪಾಲಿಕೆ ಸದಸ್ಯೆ ಸೌಮ್ಯಾ ಉಮೇಶ್ ಅವರು ಶಾಸಕ ಎಸ್.ಎ.ರಾಮದಾಸ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ನಂಜುಮಳಿಗೆ ವೃತ್ತದಲ್ಲಿ ನಡೆದ ರಾಮದಾಸ್ ಹುಟ್ಟುಹಬ್ಬ ಸಮಾರಂಭದಲ್ಲಿ ಶಾಸಕ ರಾಮದಾಸ್ ಕೇಕ್ ಕತ್ತರಿಸಿ ಮಕ್ಕಳಿಗೆ ತಿನ್ನಿಸುವ ಮೂಲಕ ಸಂಭ್ರಮಿಸಿದರು.
ಬಳಿಕ ಅವರು ನೂರಾರು ಮಕ್ಕಳಿಗೆ ಪುಸ್ತಕ, ನೋಟ್ ಬುಕ್, ಸೇರಿದಂತೆ ಬ್ಯಾಗ್‍ಗಳನ್ನು ವಿತರಣೆ ಮಾಡಿದರು. ಬಳಿಕ ಅವರು ಒಂದು ಕಾಲನ್ನು ಕಳೆದುಕೊಂಡು ಅಂಗವಿಕಲತೆಯಿಂದ ನರಳುತ್ತಿದ್ದ ಲೋಕೇಶ್ ಎಂಬವರಿಗೆ ಕೃತಕ ಕಾಲನ್ನು ವಿತರಿಸಿದರು. ಬಳಿಕ ಅವರು ಮಾತನಾಡಿ ಇದೊಂದು ಪುಣ್ಯದ ಕೆಲಸ. ಪಾಲಿಕೆ ಸದಸ್ಯರ ಈ ಅರ್ಥಪೂರ್ಣ ಕಾರ್ಯಕ್ರಮ ನನಗೆ ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಸೌಮ್ಯಾ ಉಮೇಶ್ ಅವರು ರಾಮದಾಸ್ ಅವರಿಗೆ ಅವರ ಭಾವಚಿತ್ರದ ಫೋಟೋ ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಡಿವೇಲು, ನಾಗೇಂದ್ರ ಕುಮಾರ್, ಶ್ರೀನಿವಾಸ್, ನಾಗಚಂದ್ರ, ನಗರಪಾಲಿಕೆ ಮಾಜಿ ಸದಸ್ಯೆ ವಿದ್ಯಾ, ಉಮೇಶ್, ಕಲಾವಿದೆ ಪುಟ್ಟಮ್ಮ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು