ವೃದ್ಧರಿಗೆ ಬೆಡ್ ಶೀಟ್, ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಶಾಸಕ ರಾಮದಾಸ್ ಹುಟ್ಟುಹಬ್ಬ ಆಚರಿಸಿದ ಬಿಜೆಪಿ ಮುಖಂಡ ಗಿರಿ

ಮೈಸೂರು : ನಗರದ ಬಿಜೆಪಿ ಯುವ ಮುಖಂಡ ಗಿರಿ ನೇತೃತ್ವದಲ್ಲಿ ನೂರಾರು ವೃದ್ಧರಿಗೆ ಬೆಡ್ ಶೀಟ್ ಹಾಗೂ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಶಾಸಕ ರಾಮದಾಸ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಜಯನಗರ 14ನೇ ಕ್ರಾಸ್ ಅರಳಿಕಟ್ಟೆ ಬಳಿ ಬುಧವಾರ ಸಂಜೆ ನಡೆದ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ರಾಮದಾಸ್ ಅವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ಬಳಿಕ ರಾಮದಾಸ್ ಕೇಕ್ ಕಟ್ ಮಾಡಿ ಮಕ್ಕಳಿಗೆ ತಿನ್ನಿಸಿದರು. ನಂತರ ನೂರಾರು ವೃದ್ಧರಿಗೆ ಬೆಡ್ ಶೀಟ್, ಸಸಿ ಹಾಗೂ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ನೂರಾರು ಜನರು ರಾಮದಾಸ್ ಅವರಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿದರು.
ಕಾರ್ಯಕ್ರಮದಲ್ಲಿ ಸುಜಾತ ತಂಡದವರಿಂದ ಕನ್ನಡ ಚಲನಚಿತ್ರ ಗೀತೆಗಳ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಾಮದಾಸ್ ಅವರ ನೂರಾರು ಬೆಂಬಲಿಗರು ಕಾರ್ಯಕ್ರಮದಲ್ಲಿ ಹಾಜರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು