ಹನೂರು : ಪ್ರವಾದಿ ಮಹಮ್ಮದ್ ಫೈಗಂಬರ್ ಅವರ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಿನ ಚಿಗತ್ತಾಪುರ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್ ಮಿಲಾದ್ ಆಚರಿಸಿದರು. ಗ್ರಾಮದ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆಯು ಉರ್ದು ಶಾಲೆ ರಸ್ತೆ ಸೇರಿದಂತೆ ಗ್ರಾಮದ ಮುಸ್ಲಿಂ ಬಡಾವಣೆಯ ವಿವಿಧ ಬೀದಿಗಳಲ್ಲಿ ಸಂಚರಿಸಿ ಮತ್ತೇ ಮಸೀದಿ ಬಳಿ ಬಂದು ಸೇರಿತು. ಮೆರವಣಿಗೆ ಉದ್ದಕ್ಕೂ ಭಾರತ ದೇಶದ ಬಾವುಟ ರಾರಾಜಿಸುತ್ತಿತ್ತು. ನಂತರ ವಿಶೇಷ ಪ್ರಾರ್ಥನೆ, ಫಾತಿಹಾ ನಡೆದು ಎಲ್ಲರಿಗೂ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ಒದಗಿಸಿದ ಪೊಲೀಸ್ ಸಿಬ್ಬಂದಿಗಳಾದ ಎಎಸ್‍ಐ ಪ್ರಭು ಮತ್ತು ಆರಕ್ಷಕ ಶೆಟ್ಟಿ ಅವರನ್ನು ಮಸೀದಿಯಿಂದ ಗೌರವಿಸಲಾಯಿತು.
0 ಕಾಮೆಂಟ್‌ಗಳು