ಡಾ.ಎನ್.ಕೃಷ್ಣ
ಪಾಂಡವಪುರ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತೇಜಸ್ವಿ ಅಭಿಮಾನಿ ಬಳಗದಿಂದ ಅಕ್ಟೋಬರ್ 12 ರಂದು ಸಂಜೆ 5.30ಕ್ಕೆ ಪಟ್ಟಣದ ಕಸಾಪ ಭವನದಲ್ಲಿ ದೈನಂದಿನ ಜೀವನದಲ್ಲಿ ಸ್ವಾಸ್ಥ್ಯ ಸಂವರ್ಧನೆ : ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಖ್ಯಾತ ಹೃದ್ರೋಗ ತಜ್ಞ ಬೆಂಗಳೂರಿನ ಡಾ.ಎನ್.ಕೃಷ್ಣ ಅವರು ಈ ಕುರಿತು ಉಪನ್ಯಾಸ ನೀಡುವರು.
ರಸ್ತೆ ನಿಯಮಗಳ ಬಗ್ಗೆ ಉಪನ್ಯಾಸ
ಎಚ್.ಆರ್.ವಿವೇಕಾನಂದ
ಜತೆಗೆ ಪಾಂಡವಪುರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಎಚ್.ಆರ್.ವಿವೇಕಾನಂದ ಅವರಿಂದ ವಾಹನ ಚಾಲಕರು ಕಡ್ಡಾಯವಾಗಿ ಪಾಲಿಸಬೇಕಾದ ರಸ್ತೆ ನಿಯಮಗಳ ಬಗ್ಗೆ ಉಪನ್ಯಾಸ
ಕಾರ್ಯಕ್ರಮವನ್ನೂ ಸಹ ಏರ್ಪಡಿಸಲಾಗಿದೆ ಎಂದು ತೇಜಸ್ವಿ ಬಳಗದ ಕ್ಯಾತನಹಳ್ಳಿ ಅಮೀತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 ಕಾಮೆಂಟ್‌ಗಳು