ಧನು ಕೊಲೆಗೆ ತಿಂಗಳ ಹಿಂದೆಯೇ ಪ್ಲಾನ್ ನಡೆದಿತ್ತು ಕೊಲೆಯಾದ ಧನು @ ಧನಂಜಯ್ಯ
ವರದಿ-ವಿಶ್ವನಾಥ್, ಪಾಂಡವಪುರ
ಪಾಂಡವಪುರ : ಕಳೆದ ಸೆಪ್ಟಂಬರ್ 29ರ ರಾತ್ರಿ ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದ ಸಮೀಪ ನೀಲನಹಳ್ಳಿ ಗೇಟ್‍ನಲ್ಲಿ ಅದೇ ತಾನೆ ತನ್ನ ಗೆಳೆಯರ ಜತೆ ಢಾಬಾದಲ್ಲಿ ಊಟ ಮುಗಿಸಿ ಹೊರಬಂದ ಧನು ಅಲಿಯಾಸ್ ಧನಂಜಯ್ಯ ಎಂಬ 22 ವರ್ಷದ ಯುವಕನನ್ನು ಐದು ಜನ ಯುವಕರ ಗುಂಪೊಂದು ಅಡ್ಡಗಟ್ಟಿ ಚಾಕುವಿನಿಂದ ತಿವಿದು, ಕೆಳಕ್ಕೆ ಕೆಡವಿ ಸರಸರನೆ ಕತ್ತುಕೊಯ್ದು ಕ್ಷಣಮಾತ್ರದಲ್ಲಿ ಆತನ ಕತೆ ಮುಗಿಸಿ ಕೇಕೆ ಹಾಕಿ ನಕ್ಕಿತ್ತು.
ಕೊಲೆಯ ನಂತರ ಕೊಲೆಗಡುಕರು ತಾವು ಮಾಡಿದ ಘನಂದಾರಿ ಕೆಲಸವನ್ನು ವಾಟ್ಸಾಪ್ ಸ್ಟೇಟಸ್ ಮೂಲಕ ಹರಿಬಿಟ್ಟು ವಿಕೃತಿಯನ್ನು ಮೆರೆದಿದ್ದರು. ಗೆಳೆಯರಿಗೆ ಫೋನ್ ಕರೆಗಳನ್ನು
ಮಾಡಿ ಆತನ ಕತೆ ಮುಗಿಸಿರುವುದಾಗಿ ಹೇಳಿ ಅಟ್ಟಹಾಸ ಮೆರೆದಿದ್ದರು.
ತಮ್ಮದೇ ಊರಿನ ತಮ್ಮೊಂದಿಗೆ ಆಡಿ, ಹಾಡಿ, ಉಂಡು, ತಿಂದು ಬೆಳೆದ ಗೆಳೆಯನ ಕತ್ತುಕೊಯ್ದು ಕೊಲೆ ಮಾಡುವಷ್ಟು ಜಿದ್ದು ಏನಿತ್ತು? ಎನ್ನುವುದನ್ನು ಕೇಳಿದರೆ ಬೆಚ್ಚಿ ಬೀಳುತ್ತೀರಿ.
ಕೊಲೆಯ ಹಿಂದೆ ಅಬಕಾರಿ ಮಾಫಿಯಾದ
ಕಾಣದ ಕೈಗಳು ಕೆಲಸ ಮಾಡಿದ್ದವು ಎಂದು ಧನು ತಂದೆ ಸ್ವಾಮಿ ಆರೋಪಿಸುತ್ತಾರೆ. ಹಳ್ಳಿಗಳ ಪೆಟ್ಟಿ ಅಂಗಡಿಗಳಿಗೆ ಪಾಂಡವಪುರದ ವೈನ್ ಸ್ಟೋರ್‍ಗಳಿಂದ ಮದ್ಯವನ್ನು ಅಕ್ರಮವಾಗಿ ಸಾಗಿಸುವ ನೆಟ್‍ವರ್ಕ್ ಧನು ಕೊಲೆಗೆ ಕಾರಣವಾಗಿತ್ತು ಎನ್ನುವುದು ಧನು ತಂದೆ ಸ್ವಾಮಿ ಆರೋಪ.
`ಕೊಲೆಗೆ ಒಂದು ತಿಂಗಳ ಹಿಂದೆಯೇ ಪ್ಲಾನ್ ನಡೆದಿತ್ತು. ಅಬಕಾರಿ ಮಾಫಿಯಾ ನನ್ನ ಮಗನ ಕೊಲೆಗೆ ಕಾರಣವಾಗಿದೆ. 22-8-2022 ರಂದು ಸ್ಕೂಟರ್‍ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ರಾಘು ಎಂಬ ಯುವಕನನ್ನು ನಮ್ಮದೇ ಗ್ರಾಮದ ಕೆಲವು ಯುವಕರು ತಡೆದು ಪ್ರಶ್ನಿಸಿದರು. ಈ ಘಟನೆಯನ್ನು ನನ್ನ ಮಗ ಧನು ವಿಡಿಯೋ ಮಾಡಿದ್ದ. ಅಷ್ಟೇ ಅವನು ಮಾಡಿದ್ದ ತಪ್ಪು. ಇದು ದ್ವೇಷಕ್ಕೆ ಕಾರಣವಾಗಿದೆ. ದಿನನಿತ್ಯ ಹಳ್ಳಿಗಳಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರು ತಮ್ಮ ಅಕ್ರಮ ವ್ಯವಹಾರಕ್ಕೆ ಯುವಕರಿಂದ ಅಡ್ಡಿ ಉಂಟಾದರೆ ಮುಂದೆ ತಮ್ಮ ಸಂಪಾದನೆಗೆ ಕತ್ತರಿ ಬೀಳಬಹುದು. ಇದಕ್ಕೊಂದು ಅಂತ್ಯ ಹಾಡಬೇಕೆಂದು ನನ್ನ ಮಗನ ಕೊಲೆಗೆ ಸ್ಕೆಚ್ ಹಾಕಲಾಯಿತು.
0 ಕಾಮೆಂಟ್‌ಗಳು