ಮಳವಳ್ಳಿಯಲ್ಲಿ ಶಾಲಾ ಬಾಲಕಿ ಅತ್ಯಾಚಾರವೆಸಗಿ ಕೊಲೆ ಶಿಕ್ಷಕನನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ತಹಶೀಲ್ದಾರ್ ಮೂಲಕ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಕೆ  

ವರದಿ-ಟಿ.ಬಿ.ಸಂತೋಷ, ಮದ್ದೂರು

ಮಳವಳ್ಳಿ : ಪಟ್ಟಣದಲ್ಲಿ ಹತ್ತು ವರ್ಷದ ಬಾಲಕಿಗೆ ಮನೆ ಪಾಠ ಹೇಳಿಕೊಡುವ ನೆಪದಲ್ಲಿ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಕಾಮುಕ ಶಿಕ್ಷಕನನ್ನು ಗಲ್ಲಿಗೆರಿಸುವಂತೆ ಒತ್ತಾಯಿಸಿ ಕೆ.ಎಂ.ದೊಡ್ಡಿಯ ಪ್ರಗತಿಪರ ಸಂಘಟನೆಗಳು ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ವಿಶ್ವೇಶ್ವರಯ್ಯ ವೃತ್ತದಲ್ಲಿ ಮದ್ದೂರು ಮಳವಳ್ಳಿ ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ತಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಕಾಮುಕ ಶಿಕ್ಷಕನ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಬಳಿಕ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ನಾಡ ಕಚೇರಿಗೆ ತೆರಳಿ ಉಪ ತಹಶೀಲ್ದಾರ್ ಶಿವಲಿಂಗಯ್ಯ ಮೂಲಕ ಗೃಹ ಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದರು. 
ಸಿ.ಎ.ಕೆರೆ ರಂಗಭೂಮಿ ಕಲಾವಿದರ ತೊರೆಚಾಕನಹಳ್ಳಿ ಶಂಕರೇಗೌಡ ಮಾತನಾಡಿ, ಪುಟ್ಟ ಶಾಲಾ ಬಾಲಕಿ ಮೇಲೆ  ಅತ್ಯಾಚಾರವೆಸಗಿರುವ ಕಾಮುಕ ಶಿಕ್ಷಕ ಕಾಂತರಾಜ್ ರವರನ್ನು ಗಲ್ಲಿಗೇರಿಸಿದರೆ ಮಾತ್ರ ಬಾಲಕಿ ಸಾವಿಗೆ ನ್ಯಾಯ ಸಿಗುತ್ತದೆ. ಸರ್ಕಾರ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ  ಡಿ.ಎ.ಕೆರೆ ಲತಾ ಮಾತನಾಡಿ, ಬಾಲಕಿ ಮೇಲೆ ನಡೆದಿರುವ ಅಮಾನವೀಯ ಕೃತ್ಯದಿಂದ ದೇಶವೇ ತಲೆ ತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಇಂತಹ ಅಮಾ ನವೀಯ ಕೃತ್ಯಗಳು ಸಂಭವಿದಂತೆ ಎಚ್ಚರಿಕೆ ವಹಿಸಬೇಕು ಎಂದರು. 
ದಲಿತ ಮುಖಂಡರಾದ ಕರಡಕೆರೆ ಯೋಗೇಶ್, ಮಣಿಗೆರೆ ಕಬ್ಬಾಳಯ್ಯ, ಗ್ರಾಪಂ ಸದಸ್ಯ ಮಂಜುನಾಥ್, ಆಸರೆ ರಘು ವೆಂಕಟೇಗೌಡ, ಪ್ರಜಾಪ್ರಿಯ ವೆಂಕಟೇಶ್, ಕರಡಕೆರೆ ವಸಂತಮ್ಮ, ಡಿ.ಎ.ಕೆರೆ ಶೋಭ, ಯಡಗನಹಳ್ಳಿ ರಮೇಶ್, ಇಂದಿರಾ, ಪೂರ್ಣಿಮಾ, ಮನು, ಅಭಿμÉೀಕ ಮುಂತಾದವರು ಇದ್ದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು