ಕೊನೆಗೂ ಪೊಲೀಸ್ ಭದ್ರತೆಯಲ್ಲಿ ದೊಡ್ಡರಸಿನಕೆರೆ ಶ್ರೀ ಸಣ್ಣಕ್ಕಿರಾಯಸ್ವಾಮಿ ದೇವಾಲಯದ ಬಾಗಿಲು ತೆರವು

ಗ್ರಾಮಸ್ಥರ ಹೋರಾಟಕ್ಕೆ ಸಂದ ಜಯ

ವರದಿ-ಟಿ.ಬಿ.ಸಂತೋಷ, ಮದ್ದೂರು 

ಮದ್ದೂರು : ದೇವಸ್ಥಾನದ ಟ್ರಸ್ಟಿಗಳು ಮತ್ತು ಭಕ್ತರ ನಡುವಿನ ಮುಸುಕಿನ ಗುದ್ದಾಟದಿಂದ ಕಳೆದೆರಡು ತಿಂಗಳಿನಿಂದ ಬೀಗ ಜಡಿಯಲಾಗಿದ್ದ ತಾಲೋಕಿನ ದೊಡ್ಡರಸಿನಕೆರೆ ಗ್ರಾಮದ ಶ್ರೀ ಸಣ್ಣಕ್ಕಿರಾಯಸ್ವಾಮಿ ದೇವಾಯಲದ ಬಾಗಿಲನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರಯಲಾಯಿತು. 

ದೇವಾಲಯದ ಟ್ರಸ್ಟಿ ಜಯಪ್ರಕಾಶ್ ಗೌಡ ಹಾಗೂ ಕುಲಬಾಂದವರ ನಡುವಿನ ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೆರಿತ್ತು. ದೇವಾಲಯದ ಬಾಗಿಲನ್ನು ತೆರೆದು ಸಾರ್ವಜನಿಕರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯ ಮಧ್ಯಂತರ ಅದೇಶ ನೀಡಿತ್ತಾದರೂ ಟ್ರಸ್ಟಿ ಜಯಪ್ರಕಾಶ್‍ಗೌಡ ಬಾಗಿಲು ತೆರೆಯಲು ಅವಕಾಶ ನೀಡಿರಲಿಲ್ಲ. ಇದು ನ್ಯಾಯಾಂಗ ನಿಂದನೆಯಾಗಿತ್ತು. ಗುರುವಾರ ಮದ್ಯಾಹ್ನ ಸುಮಾರು 4 ಗಂಟೆಗೆ ಹೈಕೋರ್ಟ್ ಆದೇಶದ ಮೇರೆಗೆ ಕೆ.ಎಂ.ದೊಡ್ಡಿ ಉಪತಹಶೀಲ್ದಾರ್ ಶಿವಲಿಂಗಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಗ್ರಾಮಸ್ಥರು ಹಾಗೂ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ದೇವಸ್ಥಾನ ಬಾಗಿಲಿನ ಬೀಗ ತೆರೆಯಲಾಯಿತು.
ಕಳೆದ ಮೂರು ತಿಂಗಳನಿಂದ ಕಗ್ಗತ್ತಲ್ಲಿದ್ದ ದೇವರ ಮೂರ್ತಿಯನ್ನು ನೋಡಿ ಗ್ರಾಮಸ್ಥರು ಹಾಗೂ ಭಕ್ತರು ಪುನೀತರಾದರು.  

ಉಪ ತಹಸೀಲ್ದಾರ್ ಶಿವಲಿಂಗಯ್ಯ ಮಾತನಾಡಿ, ಹೈಕೋರ್ಟ್ ಅದೇಶ ಹಾಗೂ ಮದ್ದೂರು ತಹಸೀಲ್ದಾರ್ ಆದೇಶದ ಮೇರೆಗೆ ಸ್ಥಳೀಯ ಅಧಿಕಾರಗಳ ಜೊತೆಗೂಡಿ ದೇವಸ್ಥಾನದ ಬಾಗಿಲು ತೆರೆದಿದ್ದು ದೇವಸ್ಥಾನಕ್ಕೆ ಗ್ರಾಮಸ್ಥರು, ಹಾಗೂ ಭಕ್ತರು ಎಂದಿನಂತೆ ಪೂಜಾ ಕೈಂಕರ್ಯ ಕೈಗೊಂಡು ಪೂಜೆ ಸಲ್ಲಿಸಬಹುದು ಎಂದರು. 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು