ಮದ್ದೂರು ತಾಲೂಕಿನ ಭಾರತಿನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಸಿಗದೇ ಹಾವು ಕಡಿದ ವ್ಯಕ್ತಿಗೆ ಚಿಕಿತ್ಸೆ ಸಿಗದೇ ಪರದಾಡುವಂತೆಯಾಗಿದೆ ..
ಕೆ.ಎಂ.ದೊಡ್ಡಿಯ ಪಕ್ಕದ ಸುಣ್ಣದ ದೊಡ್ಡಿ ಗ್ರಾಮದ ಚನ್ನೇಗೌಡ ಎಂಬ ರೈತನಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿದ್ದು, ಚಿಕಿತ್ಸೆಗೆ ಮಂಡ್ಯ ಜಿಲ್ಲಾಸ್ಪತ್ರೆಗೆ ತೆರಳಲು ಆಂಬ್ಯುಲೆನ್ಸ್ ಸಿಗದೇ ಪರದಾಡುವಂತೆಗಾಗಿತ್ತು ನಂತರ ಚಿಕಿತ್ಸೆಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ.
ಈ ಘಟನೆ ಸಂಬಂಧಿಸಿದಂತೆ ಅರೋಗ್ಯ ಇಲಾಖೆ,ಆಂಬ್ಯುಲೆನ್ಸ್ ಸಿಬ್ಬಂದಿಗೆ ಕಾರ್ಯ ವೈಖರಿಯ ವೈಫಲ್ಯಕ್ಕೆ ಕೆ.ಎಂ.ದೊಡ್ಡಿ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ
ಈ ಘಟನೆಗೆ ಸಂಬಂದಿಸಿದಂತೆ ಕೆ.ಎಂ.ದೊಡ್ಡಿಯ ಸುಮಾರು ಎಂಟರಿಂದ ಹತ್ತು ಜನ ನಾಗರಿಕರು ಆಂಬ್ಯುಲೆನ್ಸ್ 108 ಸಹಾಯವಾಣಿಗೆ ಕರೆ ಮಾಡಿದರು 108 ಸಿಬ್ಬಂದಿ ಕರೆ ಸ್ವೀಕರಿಸದೇ ,ಲೋಪವೆಸಗಿ ಹಾವು ಕಡಿತಕ್ಕೊಳಗಾದ ವ್ಯಕ್ತಿಯ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
0 ಕಾಮೆಂಟ್‌ಗಳು