ಹನೂರು: ಅಪಘಾತದಲ್ಲಿ ಮೃತಪಟ್ಟರೂ ತನ್ನ ಎರಡು ಣ್ಣುಗಳನ್ನು ದಾನ ಮಾಡುವ ಮೂಲಕ ಹ ಚಂದ್ರಶೇಖರ್ (21) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮುಲತಃ ಹನೂರು ತಾಲ್ಲೂಕಿನ ಚಿಕ್ಕರಂಗಶೆಟ್ಟಿದೂಡ್ಧಿ ಗ್ರಾಮದ ನಂಜುಂಡಸ್ವಾಮಿ ಅವರ ಪುತ್ರ ಚಂದ್ರಶೇಖರ್ ಡಿಪ್ಲೋಮಾ ಮುಗಿಸಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ಸ್ನೇಹಿತನ ಹುಟ್ಟುಹಬ್ಬ ಆಚೆರಣೆಗೆ ಹೋಗಿ ಹಿಂದಿರುಗುವ ಸಮಯದಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಚಂದ್ರಶೇಖರ್ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸುತ್ತಿದ್ದಂತೆ ಕುಟಂಬಸ್ಥರು ಮೃತರ ನೇತ್ರಗಳನ್ನು ಲಯನ್ಸ್ ಕಣ್ಷಿನ ಅಸ್ಪತ್ರೆಗೆ ದಾನ ಮಾಡಿದ್ದಾರೆ. ಒಟ್ಟಾರೆ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಚಂದ್ರಶೇಖರ್ ಬಗ್ಗೆ ದುಃಖದ ಜತೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
0 ಕಾಮೆಂಟ್‌ಗಳು