ವರದಿ : ಶಾರುಕ್ ಖಾನ್ ಹನೂರು
ಹನೂರು : ತಾಲ್ಲೂಕಿನ ಮಂಚಪುರ ಗ್ರಾಮದ ತೋಟದ ಬಾವಿಯಲ್ಲಿ ಬಿದ್ದಿದ್ದ ಹಸುವನ್ನು ರಕ್ಷಣೆ ಮಾಡುವಲ್ಲಿ ಅಗ್ನಶಾಮಕ ದಳದ ಸಿಂಬಂದ್ಧಿಗಳು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಮಂಚಾಪುರ ಗ್ರಾಮದ ತೋಟದ ಬಾವಿಯ ಸಮೀಪ ಮೇಯುತ್ತಿದ್ದ ಹಸುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ತಕ್ಷಣ ಸುಧಾರಾಣಿ ಎಂಬವರು ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ತಂಡದವರು ಪ್ರಬಾರ ಠಾಣಾಧಿಕಾರಿ ಟಿ.ಪ್ರಶಾಂತ್ ನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಹಸು ರಕ್ಷಣೆ ಮಾಡಿದರು.
ಸಿಬ್ಬಂದಿಗಳಾದ ಮಹೇಶ್. ಗಿರೀಶ್. ನವೀನ್ ಹಾಗೂ ನಾಗೇಶ್ ಇದ್ದರು.
ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಅಗ್ನಿಶಾಮಕ ತಂಡದ ಕಾರ್ಯಾಚರಣೆಗೆ ಸಾರ್ವಜನಿಕರು ಶ್ಲಾಘಿಸಿದರು.
