ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಅಠವಳೆ ಪಕ್ಷದಿಂದ ಪೂನಾ ಒಪ್ಪಂದಕ್ಕೆ ೯೦ ವರ್ಷ ಕುರಿತು ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಸಮಾವೇಶ
ಸೆಪ್ಟೆಂಬರ್ 20, 2022
ಮೈಸೂರು : ಪೂನಾ ಒಪ್ಪಂದ ಗತಿಸಿ ೯೦ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಅಠವಳೆ ಪಕ್ಷದ ವತಿಯಿಂದ ಇದೇ ಸೆ.೨೪ ರಂದು ಎಲ್‌ಐಸಿ ವೃತ್ತದ ಬಳಿಯ ಚರ್ಚ್ ಸಭಾಂಗಣದಲ್ಲಿ ಎಸ್ಸಿ, ಎಸ್ಟಿ ಜನಾಂಗಗಳ ರಾಜಕೀಯ ಹಕ್ಕುಗಳನ್ನು ಹತ್ತಿಕ್ಕಿದ ಕರಾಳ ಅಧ್ಯಾಯ-ಪೂನಾ ಒಪ್ಪಂದಕ್ಕೆ ೯೦ ವರ್ಷ ಎಂಬ ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗಿದೆ.
ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ, ಇಂದಿನ ಎಸ್ಸಿ, ಎಸ್ಟಿ ಸಮುದಾಯಗಳ ರಾಜ್ಯಾಧಿಕಾರದ ಹಕ್ಕಿನ ವಂಚನೆಗೆ ಇದೇ ಪೂನಾ ಒಪ್ಪಂದ ಮುಳುವಾಗಿತ್ತು. ಸ್ವತಂತ್ರ ಭಾರತದಲ್ಲಿ ರಾಜಕೀಯ ಮೀಸಲಾತಿ ಸೂತ್ರ ಅನುಷ್ಠಾನಗೊಂಡು ಇಷ್ಟು ದಶಕ ಕಳೆದರೂ ದಲಿತ ಸಮುದಾಯಗಳು ರಾಜಕೀಯ ಗುಲಾಮಗಿರಿಯಿಂದ ಹೊರ ಬಂದಿಲ್ಲ ಎಂದು ಬೇಸರಿಸಿದರು.
ಹೀಗಾಗಿ ಈ ಸಮಾವೇಶ ಆಯೋಜಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾಂದಾಸ್ ಅಠವಳೆ ಉದ್ಘಾಟಿಸುವರು, ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮೇಲ್ಪದರದ ದಲಿತರನ್ನು ಒಂದು ವೇಳೆ ಮೀಸಲಾತಿಯಿಂದ ಹೊರಗಿಟ್ಟರೆ ರಾಜ್ಯ ದಲಿತ ಸಿಎಂ ಕಾಣಲು ಸಾಧ್ಯವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪದಾಧಿಕಾರಿಗಳಾದ ಬನಶಂಕರಿ ನಾಗು, ಎಂ. ಮುನಿರಾಜು, ವಿನೋದ್, ಸತೀಶ್, ಶಿವಮಾದು, ಎಸ್. ಸುರೇಶ್, ಇನ್ನಿತರರು ಹಾಜರಿದ್ದರು.
0 ಕಾಮೆಂಟ್‌ಗಳು