ಹಿರಿಯ ಪತ್ರಕರ್ತರಾದ ರಾಮಚಂದ್ರ ಗಂಗಾ ಬರೆದಿರುವ `ಒಡಲ ಒಗಟು’ ಕೃತಿ ಬಿಡುಗಡೆ
ಸೆಪ್ಟೆಂಬರ್ 20, 2022
ಮೈಸೂರು : ಹಿರಿಯ ಪತ್ರಕರ್ತರಾದ ರಾಮಚಂದ್ರ ಗಂಗಾ ಅವರ ಪ್ರಕಟಿತ ಲೇಖನಗಳ ಸಂಕಲನವಾದ `ಒಡಲ ಒಗಟು’ ಕೃತಿ ಬಿಡುಗಡೆ ಕಾರ್ಯಕ್ರಮ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಯಿತು.
ಈ ವೇಳೆ ಪರಿವರ್ತನ ರಂಗ ಸಂಘಟಕ ಮಾಧವ ಖರೆ ಮಾತನಾಡಿ, ಮಾನವಿಕ ಮೌಲ್ಯಗಳನ್ನು ಈ ಲೇಖನಗಳು ಒಳಗೊಂಡಿವೆ. ಅಸಂಪ್ರದಾಯಿಕ ಕಾಯಕಗಳಲ್ಲಿ ತೊಡಗಿದವರ ದೈನಂದಿನ ಬದುಕು, ಬವಣೆಗಳನ್ನು ಲೇಖನಗಗಳಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ. ಮೈಸೂರಿನ ನಿನ್ನೆಗಳನ್ನು ನೋಡುವ ಆಸಕ್ತಿ ಇರುವವರಿಗೆ ಇದು ಆಕರ ಕೃತಿಯಾಗಲಿದೆ ಎಂದು ವಿವರಿಸಿದರು.
ಹಿರಿಯ ಪತ್ರಕರ್ತರಾದ ನಟರಾಜ್ ಮಳಲಿ ಪುಸ್ತಕ ಬಿಡುಗಡೆಗೊಳಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಟಿ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಕೆ. ದೀಪಕ್, ಎಚ್.ಆರ್. ಅಧ್ಯಾಪಕ್, ಲೇಖಕ ರಾಮಚಂದ್ರ ಗಂಗಾ, ಪ್ರಕಾಶಕ ಯು.ಎಸ್. ಮಹೇಶ್, ಎಂ. ಸುಬ್ರಹ್ಮಣ್ಯ ಹಾಜರಿದ್ದರು.
0 ಕಾಮೆಂಟ್‌ಗಳು