ತೋಮಿಯಾರ್ ಪಾಳ್ಯ, ನಾಗನತ್ತ, ಚಂಗವಾಡಿ ಅಡ್ಡರೋಡ್ (ಗಣೇಶಪುರ) ಡೈರಿಗಳ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಯಶಸ್ವಿ


 ವರದಿ-ಹನೂರು ಶಾರೂಖ್‌ಖಾನ್

ಹನೂರು : ಹನೂರು ತಾಲ್ಲೂಕಿನ ತೋಮಿಯಾರ್ ಪಾಳ್ಯ ಸೇರಿದಂತೆ ನಾಗನತ್ತ, ಚಂಗವಾಡಿ ಅಡ್ಡರೋಡ್(ಗಣೇಶಪುರ) ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಪ್ರತ್ಯೇಕವಾಗಿ ಮಂಗಳವಾರ ೨೦೨೨ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
ಚಾಮುಲ್ ನಿರ್ದೇಶಕ ಶಾಹುಲ್ ಅಹಮ್ಮದ್ (ತಾರೀಖ್) ಮಾತನಾಡಿ, ರೈತರು ಜಾನುವಾರುಗಳನ್ನು ಸಾಕುವುದರ ಜೊತೆಗೆ ಅವುಗಳÀ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ. ಇದಕ್ಕಾಗಿ ರಬ್ಬರ್‌ಮ್ಯಾಟ್ ಕೊಡಲಾಗುತ್ತದೆ, ರೈತರ ಶ್ರಮದಿಂದ ಫಸಲು ಹಾಗೂ ರಾಸುಗಳ ಹಾಲು ಉತ್ಪಾದನೆಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ. ರೈತರ ಶ್ರಮಕ್ಕೆ ಪ್ರತಿಫಲವಾಗಿ ೩ರೂ. ಹೆಚ್ಚಳ ಮಾಡುವ ವಿಷಯ ಇದೀಗ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದ್ದು, ಇದು ಕಾರ್ಯಗತವಾಗಲಿದೆ ಎಂದು ಭರವಸೆ ನೀಡಿದರು. 
ಚಾಮುಲ್ ನಿದೇರ್ಶಕ ಎಸ್.ಮಹದೇವಸ್ವಾಮಿ (ಉದ್ದನೂರು ಪ್ರಸಾದ್) ಮಾತನಾಡಿ, ಉತ್ಪಾದನೆ ಆಗುತ್ತಿರುವ ಹಾಲನ್ನು ಹೊರ ದೇಶಗಳಿಗೆ ಸೇರಿಂದಂತೆ ಇತರೆ ರಾಜ್ಯಗಳಿಗೆ ರಫ್ತ್ತು ಮಾಡಲಾಗುತ್ತಿದೆ ಎಂದು ಬಣ್ಣಿಸಿ ರಾಸುಗಳಿಂದ ಉತ್ಪತ್ತಿಯಾಗುವ ಹಾಲನ್ನು ಸಂಘದ ಉತ್ಪಾದಕರು ಉತ್ತಮ ಹಾಗೂ ಗುಣಮಟ್ಟದಿಂದ ಡೈರಿಗೆ ಹಾಕಬೇಕು ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ವಿಸ್ತಾರಣಾಧಿಕಾರಿ ವೆಂಕಟೇಶ್, ತೋಮಿಯಾರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ರಾಜಕಣ್ಣು, ಕಾರ್ಯದರ್ಶಿ ಎ.ಮಧುರೈಮುತ್ತು, ಹಾಲು ಪರೀಕ್ಷಕ ವಿಲಿಯಂ, ನಾಗನತ್ತ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಆಡಳಿತ ವರ್ಗ, ಇನ್ನಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು