ಶಾಸಕ ಆರ್.ನರೇಂದ್ರ ನೇತೃತ್ವದಲ್ಲಿ ಹನೂರಿನಲ್ಲಿ ಭರ್ಜರಿಯಾಗಿ ಜರುಗಿದ ಗ್ರಾಮೀಣ ದಸರಾ


 ವರದಿ-ಶಾರುಕ್ ಖಾನ್, ಹನೂರು

ಹನೂರು : ತಾಲೂಕು ಆಡಳಿತದಿಂದ ಪಟ್ಟಣದ ಕ್ರಿಸ್ತರಾಜ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಗ್ರಾಮೀಣ ದಸರಾ ಮಹೋತ್ಸವವು ಬುಧವಾರ ಸಂಭ್ರಮದಿಂದ ಜರುಗಿತು.

ಕ್ರಿಸ್ತರಾಜ ಶಾಲೆಯ ವಿದ್ಯಾರ್ಥಿಗಳ ತಂಡವು ನಾಡಗೀತೆ ಹಾಗೂ ರೈತಗೀತೆ ಹಾಡುವ ಮೂಲಕ ಗ್ರಾಮೀಣ ದಸರಾಕ್ಕೆ ಚಾಲನೆ ದೊರೆಯಿತು. ಶಾಸಕ ಆರ್.ನರೇಂದ್ರ ಸಮಾರಂಭವನ್ನು ಉದ್ಘಾಟನೆ ಮಾಡಿದರು.

ಬಳಿಕ ಅವರು ಮಾತನಾಡಿ, ೨೫ ವರ್ಷಗಳ ಹಿಂದೆ ಚಾಮರಾಜನಗರ ಮೈಸೂರು ಜಿಲ್ಲೆಗೆ ಸೇರಿತ್ತು. ಅಂದಿನಿಂದ ಇಂದಿಗೂ ದಸರಾ ಮುಂದುವರಿಸಿಕೊಂಡು ಬರಲಾಗುತ್ತಿದೆ. ಮೈಸೂರು ದಸರಾ ವಿಶ್ವ ಖ್ಯಾತಿ ಪಡೆದಿದ್ದು, ವಿದೇಶಗಳಿಂದಲೂ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಕಳೆದ ೨ವರ್ಷ ಕರೋನಾ ಹಿನ್ನಲೆ ದಸರಾ ಆಚರಣೆ ಇಲ್ಲಲಿಲ್ಲ. ಅದಕ್ಕಾಗಿ ಈ ವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಮೈಸೂರಿನ ಮಿಸ್ಟರ್ ಮ್ಯಾಜಿಕ್ ಅವರಿಂದ ಮ್ಯಾಜಿಕ್ ಶೋ ನಡೆಯಿತು. ಅಲ್ಲದೇ ಗಿಚ್ಚು ಗಿಲಿಗಿಲಿ ತಂಡದಿಂದ ಹಾಸ್ಯ ಚಟಾಕಿ, ರಸಮಂಜರಿ, ಗೀತಾ ಗಾಯನ ನೆಡೆಸಿಕೊಟ್ಟರು. ವಿವಿಧ ಶಾಲಾ ಮಕ್ಕಳು  ನೃತ್ಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಸಿ ಗ್ರಾಮೀಣ ದಸರಾಕ್ಕೆ ಮೆರಗು ತಂದರು.



ಕಾರ್ಯಕ್ರಮದಲ್ಲಿ ಹನೂರು ಪಪಂ ಅಧ್ಯಕ್ಷೆ ಚಂದ್ರಮ್ಮ, ಸದಸ್ಯರಾದ ಹರೀಶ್, ಸುದೇಶ್, ಸೋಮಶೇಖರ್, ಸಂಪತ್, ಆನಂದ್, ಮಹೇಶ್, ಮತ್ತಾಜ್, ಮಮತಾ, ಪವಿತ್ರ, ಕ್ಷೇತ್ರ ಶಿಕ್ಷಣಧಿಕಾರಿ ಶಿವರಾಜು, ಕೊಳ್ಳೇಗಾಲ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಾಧರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್ ಮಠದ್, ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್, ಮುಖ್ಯಾಧಿಕಾರಿ ಪರಶಿವಯ್ಯ, ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್, ಕಂದಾಯ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು