ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆಯಲ್ಲಾ ಬಿಜೆಪಿಗೆ ಗೆಲುವು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


 ಮೈಸೂರು : ರಾಹುಲ್ ಗಾಂಧಿ ಎಲ್ಲಿ ಬಂದು ಹೋಗುತ್ತಾರೊ ಅಲ್ಲೆಲ್ಲ ಕಮಲ ಅರಳಿದೆ ಎಂದು ಭಾರತ್ ಜೊಡೋ ಪಾದಯಾತ್ರೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ದಸರಾ ಉದ್ಘಾಟನೆಗೆ ಭಾನುವಾರ ಮೈಸೂರಿಗೆ ವಿಶೇಷ ವಿಮಾನದ ಮೂಲಕ ಪತ್ನಿ ಸಮೇತ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಅದಃಪತಃನದ ಹಾದಿಯಲ್ಲಿದೆ. ಅವರ ತಟ್ಟೆಯಲ್ಲೇ ಕತ್ತೆಗಳಷ್ಟು ಸರಣಿ ಹಗರಣ ಇಟ್ಟುಕೊಂಡು ಬಿಜೆಪಿ ಬಗ್ಗೆ ಪೇ ಸಿಎಂ ಅಭಿಯಾನ ಮಾಡುತ್ತಿದ್ದಾರೆ. ಇದು ಮೋಸ ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪಮಾಡುವ ಕಾಂಗ್ರೆಸ್ ನವರಿಗೆ ಸದನ ಕರೆದು ಆರೋಪದ ಬಗ್ಗೆ ಒಂದೇ ಒಂದು ದಾಖಲೆ ಕೊಡಿ ಎಂದರೆ, ಅವರ ಬಳಿ ಸರಕು ಇಲ್ಲದೆ ಸದನವನ್ನು ಹಾಳು ಮಾಡಿದರು. ಹಾಗಾಗಿ ಚುನಾವಣೆಗೆ ಹೋಗಬೇಕಾಗಿರುವ ಕಾರಣ ಸುಮ್ಮನೆ ಪೇ ಸಿಎಂ ಅನ್ನೋ ಆರೋಪ ಮಾಡುತ್ತಿದ್ದಾರೆ. ನಾನು ಯಾವ ಭ್ರಷ್ಟಾಚಾರದಲ್ಲಿ ತೊಡಗಿದ್ದೇನೆ ಎಂದು ಸಾಬೀತು ಪಡಿಸಲಿ ಎಂದು ಮತ್ತೊಮ್ಮೆ ಸವಾಲು ಹಾಕಿದರು.

ನಾನು ಜಾತಿ ಆಧಾರದಲ್ಲಿ ಎಂದೂ ರಾಜಕಾರಣ ಮಾಡಿಲ್ಲ, ಇವರು ಪೇ ಸಿಎಂ ಎಂದು ಹೇಳಿದ್ದರಿಂದ ಕೆಲವರ ಮನಸ್ಸಿಗೆ ನೋವಾಗಿ ಜಾತಿ ವಿಚಾರ ಪ್ರಸ್ತಾಪಿಸಿದ್ದಾರೆ. ನಾನಾಂತೂ ಎಂದೂ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಆರೋಗ್ಯ ಇಲಾಖೆಯ ೧೦೮ ಆಂಬುಲೆನ್ಸ್ ತಾಂತ್ರಿಕ ಕಾರಣಗಳಿಂದ ತೊಂದರೆಯಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದ್ದೇನೆ. ಆರೋಗ್ಯ ಸಚಿವರು ನನ್ನ ಜೊತೆ ಇದ್ದು ಎಲ್ಲಾ ಸರಿಪಡಿಸಲು ಕ್ರಮವಹಿಸುತ್ತಿದ್ದಾರೆ. ಮದರ್ ಬೋರ್ಡ್ ಕೆಟ್ಟಿದ್ದರಿಂದ ರಾಜ್ಯಾದ್ಯಂತ ತೊಂದರೆಯಾಗಿತ್ತು. ಅಧಿಕಾರಿಗಾಳು ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಹೇಳಿದರು.

ದಸರಾ ನಾಡಹಬ್ಬವೂ ಹೌದು ದಸರಾ ಆಚರಣೆಯೂ ಹೌದು. ಹಾಗಾಗಿ ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ದೇಶದ ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಮೇಯರ್ ಶಿವಕುಮಾರ್ ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು