ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ, ನಿವೃತ್ತ ಅಭಿಯಂತರರಿಗೆ ಸನ್ಮಾನ
ಮೈಸೂರು: ಪುರಾಣ ಮತ್ತು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಇತಿಹಾಸವೆಂದು ಬಿಂಬಿಸಲಾಗುತ್ತಿದೆ. ವಿಜ್ಞಾನದೊಂದಿಗೂ ಇವುಗಳನ್ನು ಹೋಲಿಕೆ ಮಾಡುತ್ತಿರುವುದು ಅಪಾಯಕಾರಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ಅಭಿಯಂತರರಿಗೆ ಅಭಿನಂದನಾ ಸಮಾರಂಭದಲ್ಲಿ ಸಂವಿಧಾನ ಪೀಠಿಕೆ ಬೋಧಿಸಿ ಮಾತನಾಡಿದರು.
ಪುರಾಣ, ಶಾಸ್ತ್ರ, ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ನಮ್ಮ ಸಂಸ್ಕೃತಿ. ಅವೆಲ್ಲವನ್ನೂ ಓದಬೇಕು. ಇದನ್ನೇ ಇತಿಹಾಸ, ಚರಿತ್ರೆ ಎಂದು ಬೋಧಿಸಿದರೆ ಪ್ರಶ್ನಿಸಬೇಕು. ಪ್ಲಾಸ್ಟಿಕ್ ಸರ್ಜರಿ, ಅಣುಬಾಂಬ್ ತಯಾರಿಕೆ, ಪುಷ್ಪಕ ವಿಮಾನ ಮುಂತಾದವು ಭಾರತದಲ್ಲಿಯೇ ಮೊದಲು ಎಂದು ಬಿಂಬಿಸಲಾಗುತ್ತಿದೆ.
ದೇಶದ ಬದಲಾವಣೆಗೆ ಅಮೂಲಾಗ್ರ ಕೊಡುಗೆ ನೀಡಿರುವ ಇಂಡಿಯನ್ ಸೈನ್ಸ್ ಕಾಂಗ್ರೆಸ್, ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡದೇ ಪುರಾಣದೊಂದಿಗೆ ವಿಜ್ಞಾನವನ್ನು ಸಮೀಕರಿಸಿ ಹೇಳಿಕೆ ನೀಡುತ್ತಿದೆ ಎಂದು ಬೇಸರಿಸಿದರು.
ಜಾಗಟೆ ಬಾರಿಸಿ, ದೀಪ ಹಚ್ಚಿದರೆ ಕೊರೊನಾ ಓಡಿ ಹೋಗುತ್ತದೆ ಎಂದು ಕರೆ ನೀಡಿದ್ದನ್ನು ಜನ ಆಲೋಚಿಸದೇ ಪಾಲಿಸಿದರು. ಒಬ್ಬ ಶಾಸಕ ಕೊರೊನಾ ನಿವಾರಣೆಗೆ ಹೋಮ-ಹವನ ಮಾಡಿಸಿದ. ಬಾಬ ರಾಮದೇವ್ ಅವರ ಕೊರೊನಿಲ್ ಮಾತ್ರೆ ತೆಗೆದುಕೊಂಡರೆ ಕೊರೊನಾ ಹೋಗುತ್ತದೆಂದು ಕೇಂದ್ರ ಆರೋಗ್ಯ ಸಚಿವರೇ ಹೇಳಿದರು. ಇದು ನಮ್ಮ ದೇಶದ ಪರಿಸ್ಥಿತಿ ಎಂದು ತಿಳಿಸಿದರು.
ಕೇಸರಿ ಶಾಲಿನಿಂದ ದೂರವಿರಿ: ಯುವಕರು ಕೇಸರಿ ಶಾಲಿನಿಂದ ದೂರವಿರಬೇಕು ಎಂದು ಮನವಿ ಮಾಡುತ್ತೇನೆ. ಕೇಸರಿ ಶಾಲು ಹಾಕಿಕೊಳ್ಳುವಂತೆ ಹೇಳುವ ನಾಯಕರಿಗೆ ಮಂತ್ರಿಗಳಿಗೆ ನಿಮ್ಮ ಮಕ್ಕಳು ಕೇಸರಿ ಶಾಲು ಹಾಕಿದ್ದಾರೆಯೇ? ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಸಮಸ್ಯೆಗಳು ಬಗೆಹರಿಯುತ್ತೇವೆಯೇ? ಅಸ್ಪಶ್ಯತೆ ಹೋಗುತ್ತದೆಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಧರ್ಮ ರಕ್ಷöಣೆ ಮಾಡುವಂತೆ ಹಿಂದುಳಿದ, ದಲಿತ ಯುವಕರನ್ನು ಬೀದಿಗೆ ತಂದು ನಿಲ್ಲಿಸುವ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಉತ್ತಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಉದ್ಯಮಿಗಳನ್ನಾಗಿ ಬೆಳೆಸಿದ್ದಾರೆ. ಹಿಜಾಬ್, ಕೇಸರಿ, ಹಲಾಲ್ ಕಟ್, ಜಟ್ಕಾ ಕಟ್ ಎಲ್ಲ ಬಿಟ್ಟು ಉದ್ಯೋಗ ಕೊಡುವಂತೆ ಸರ್ಕಾರವನ್ನು ಪ್ರಶ್ನಿಸಬೇಕು.
ಮಾಲೂರ ತಾಲೂಕಿನ ಉಳ್ಳೇರಹಳ್ಳಿಯಲ್ಲಿ ದಲಿತ ಯುವಕ ದೇವರ ಕೋಲು ಮುಟ್ಟಿದ ಕಾರಣಕ್ಕೆ ೬೦ ಸಾವಿರ ದಂಡ ಹಾಕಲಾಗಿದೆ. ಚಿಕ್ಕಬಳ್ಳಾಪುರದ ಸಂಸದರಿಗೆ ಗೊಲ್ಲರ ಹಟ್ಟಿಗೆ ಪ್ರವೇಶವಿಲ್ಲ. ನಾವೀಗ ಆಧುನಿಕ ಕಾಲದಲ್ಲಿದ್ದರೂ ನಮ್ಮ ವಿಚಾರ ಪುರಾಣದಲ್ಲಿ ಸಿಲುಕಿಕೊಂಡಿದೆ. ಸಂವಿಧಾನ ಇರುವ ತನಕ ಬದುಕಲಿಕ್ಕೆ ಸಾಧ್ಯ, ಇಲ್ಲದಿದ್ದರೆ ನಾವೆಲ್ಲರೂ ಬದುಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಹೆಚ್ಚು ಮಾನವ ಸಂಪನ್ಮೂಲ ಹೊಂದಿರುವ ಭಾರತದಲ್ಲಿ ವಿಫುಲ ಉದ್ಯೋಗಾವಕಾಶವಿದೆ. ಅನೇಕಾರು ಕೈಗಾರಿಕೆಗಳು ಭಾರತದಲ್ಲಿ ಉದ್ಯಮ ಆರಂಭಿಸಲು ಆಸಕ್ತರಾಗುವುದು ಮಾನವ ಸಂಪನ್ಮೂಲ ಕಾರಣದಿಂದಲೇ. ನಾನು ಮಾಹಿತಿ ತಂತ್ರಜ್ಞಾನ ಸಚಿವನಾಗಿದ್ದಾಗ ಇದನ್ನು ನೋಡಿz್ದೆÃನೆ. ಆದ್ದರಿಂದ ಮೊದಲು ನಾವು ನಮ್ಮ ಮಕ್ಕಳಿಗೆ ಶಿP್ಷÀಣ ಕೊಡಬೇಕು. ಆಗಲೇ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಸನ್ಮಾನ: ಸಾಮಾಜಿಕ ಹೋರಾಟಗಾರರಾದ ಬೆಟ್ಟಯ್ಯ ಕೋಟೆ, ಚಿಕ್ಕ ಜವರಯ್ಯ, ಚೋರನಹಳ್ಳಿ ಶಿವಣ್ಣ, ನಿವೃತ್ತ ಅಭಿಯಂತರರಾದ ಟಿ.ಆರ್.ಶಿವರಾಮು, ರಾಜಶೇಖರ್ ಎಡಹಳ್ಳಿ, ಆರ್.ಕೆ.ರಾಜು, ಸುಬ್ಬರಾವ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. ೮೦ಕ್ಕಿಂತ ಹೆಚ್ಚು ಅಂಕ ಗಳಿಸಿದ ೧೨೭ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕೊಳ್ಳೇಗಾಲದ ಜೇತವನದ ಮನೋರಖ್ಖಿತ ಭಂತೇಜಿ, ಮೈಸೂರಿನ ಗಾಂಧಿನಗರದ ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮಾರಂಭ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷö ಪ್ರೊ.ಕೆ.ಸಿದ್ದರಾಜು ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷö ಡಿ.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸ್ದಿದರು. ಶಾಸಕ ಅಶ್ವಿನ್ ಕುಮಾರ್, ಮಾಜಿ ಮೇಯರ್ ಪುರುಷೋತ್ತಮ್, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮುಂತಾದವರು ಭಾಗವಹಿಸಿದ್ದರು.
`ಜ್ಞಾನಾಧಾರಿತ ಸಮಾಜ ನಿರ್ಮಾಣ ಮಾಡುವುದು ಶಿP್ಷÀಣ ಮಾತ್ರ. ಆಗ ಭಾರತ ನಂ. ೧ ಸ್ಥಾನದಲ್ಲಿರುತ್ತದೆ. ಶಿP್ಷÀಣ ಪಡೆಯುವ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಯುವಕರು ಸಾಮಾಜಿಕ ಜಾಲತಾಣದ ದಾಸರಾಗುತ್ತಿದ್ದಾರೆ. ಅದರಿಂದ ಆಚೆಗೆ ಪ್ರತಿಯೊಬ್ಬರೂ ಬರಬೇಕು. ಜೊತೆಗೆ ಸಾಮಾಜಿಕ ತಾಲತಾಣದಲ್ಲಿ ಬಂದಿರುವುದನ್ನು ಪ್ರಶ್ನಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕು’.
-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ
0 ಕಾಮೆಂಟ್‌ಗಳು