ವರದಿ : ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ಅತಿಯಾದ ಮಳೆಯಿಂದ ಮನೆ ಕಳೆದುಕೊಂಡಿದ್ದ ತಾಲ್ಲೂಕಿನ ನಿಡಘಟ್ಟ ಗ್ರಾಮದ ಸುಕನ್ಯಾ ವೆಂಕಟರಾಮು ಅವರಿಗೆ ಸಮಾಜ ಸೇವಕ ಕದಲೂರು ಉದಯ್ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಆರ್ಥಿಕ ಸಹಾಯ ನೀಡಿದರು.
ನಂತರ ಇತ್ತೀಚೆಗೆ ನಡೆದ ಅಪಘಾತದಲ್ಲಿ ಕಾಲು ಕಳೆದುಕೊಂಡು ಕೆಲಸ ಇಲ್ಲದೇ ಕಷ್ಟಕ್ಕೆ ಸಿಲುಕಿದ್ದ ಇದೇ ಗ್ರಾಮದ ಕಾಡಯ್ಯರವರ ಮಗ ವೆಂಕಟೇಶ್ ಅವರ ಕುಟುಂಬ ನಿರ್ವಹಣೆಗೂ ಸಹ ಉದಯ್ ಸಹಾಯ ಧನ ನೀಡಿದರು.
ಜತೆಗೆ ಗ್ರಾಮದಲ್ಲಿ ಮೃತಪಟ್ಟ ಬಡ ಕುಟುಂಬಗಳಿಗೆ ಹಾಗೂ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕುಟುಂಬಗಳಿಗೂ ಸಹ ಉದಯ್ ತಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಧನ ಸಹಾಯ ನೀಡಿದರು.
ಇದರೊಂದಿಗೆ ಗ್ರಾಮದ ಹಲವಾರು ನಿರಾಶ್ರಿತರನ್ನು ಭೇಟಿ ಮಾಡಿ ಸಹಾಯ ಹಸ್ತ ಚಾಚಿದರು.
ಈ ಸಂದರ್ಭದಲ್ಲಿ ಸಿಪಾಯಿ ಶ್ರೀನಿವಾಸ, ಗ್ರಾಪಂ ಸದಸ್ಯ ಕದಲೂರು ರವಿ, ತಿಮ್ಮೇಗೌಡ, ಯತೀಶ್, ಮಹೇಶ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು