ವರದಿ-ಶಾರೂಖ್ ಖಾನ್, ಹನೂರು
ಹನೂರು : ಸಮಾಜ ಸೇವೆಯ ಹೆಸರಲ್ಲಿ ನಿಶಾಂತ್ ಎಂಬ ವ್ಯಕ್ತಿ ಗ್ರಾಮದಲ್ಲಿ ಅಶಾಂತಿ ಮೂಡಿಸುತ್ತಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದಿನ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರುಗೇಶ್
ತಹಸಿಲ್ದಾರ್ ಅವರಿಗೆ ದೂರು ನೀಡಿದರು.
ನಿಶಾಂತ್ ಎಂಬ ವ್ಯಕ್ತಿ ಹನೂರು ಕ್ಷೇತ್ರದಲ್ಲಿ ಬಾಡಿಗೆ ಟೆಂಟ್‍ಗಳನ್ನು ಹಾಕಿಕೊಂಡು ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಳ್ಳಿ ಗ್ರಾಮದಲ್ಲಿ ತಾವು ಸಚಿವ ಸೋಮಣ್ಣ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎಂದು ಹೇಳಿಕೊಂಡು ಕ್ಷೇತ್ರದಾದ್ಯಂತ ಸುತ್ತಾಡಿ ಬಂಜಾರ ಸಮುದಾಯದ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ಹೇಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಬಂಜಾರ ಸಮುದಾಯದವರಿಗೆ ಹಣ, ಹೆಂಡ, ಬಾಡೂಟ, ಸೀರೆ ನೀಡುವುದಾಗಿ ಜನರಿಗೆ ಆಮಿಷ ಒಡ್ಡಿದ್ದಾರೆ. ಬಂಜಾರ ಸಮುದಾಯದವರು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿದ್ದು, ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ನಮಗೆ ಮಹಾರಾಜರ ಕಾಲದಿಂದಲೂ ಉತ್ತಮವಾದ ಗೌರವವಿದೆ. ಆದರೆ ನಿಶಾಂತ್ ಎಂಬುವವರು ತಮ್ಮ ಸಮಾಜದವರನ್ನು ಕೇವಲ ಹಣ ಹೆಂಡ ಬಾಡೂಟಕ್ಕೆ ಆಮಿಷ ಒಡ್ಡಿರುವುದು ಸರಿಯಲ್ಲ, ಕಳೆದ 3 ವರ್ಷಗಳ ಹಿಂದೆ ಸುಳ್ವಾಡಿ ವಿಷ ಪ್ರಸಾದ ಪ್ರಕರಣ ದೇಶದೆಲ್ಲೆಡೆ ಸುದ್ದಿಯಾಗಿ ನಮ್ಮ ಕ್ಷೇತ್ರಕ್ಕೆ ಕಳಂಕ ಬಂದಿದ್ದು, ಇಂತಹ ಪ್ರಕರಣಗಳು ಮರುಕಳಿಸಬಾರದು. ಸಮಾಜ ಸೇವೆಯ ಹೆಸರಿನಲ್ಲಿ ಜನಾಂಗದವರನ್ನು ದಿಕ್ಕು ತಪ್ಪಿಸುತ್ತಿರುವ ನಿಶಾಂತ್ ರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿμÁ್ಠಧಿಕಾರಿಗಳು, ಹಾಗೂ ತಹಸಿಲ್ದಾರ್ ರವರಿಗೆ ದೂರು ನೀಡಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಂಜಾರ ಸಮುದಾಯದ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾ ಲಂಬಾಣಿ ಸೇವಾ ಸಂಘದ ಅಧ್ಯಕ್ಷ ಎಂ.ಕೃಷ್ಣ ನಾಯಕ್, ದಿನ್ನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗುರುಸ್ವಾಮಿ, ರಾಮಕೃಷ್ಣ, ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ಸದಸ್ಯ ಗುರುನಾಯಕ್, ಮುಖಂಡ ಶಾಂತಮೂರ್ತಿ ಹಾಜರಿದ್ದರು.
0 ಕಾಮೆಂಟ್‌ಗಳು