ಕರೊನಾದಲ್ಲಿ ವೈದ್ಯಕೀಯ ಸಿಬ್ಬಂದಿ ಸೇವೆ ಅನನ್ಯ

 

ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಆಂಬುಲೆನ್ಸ್ ಚಾಲಕ ದಂಪತಿಗಳಿಗೆ ಸನ್ಮಾನ

ಪಾಂಡವಪುರ : ಕರೊನಾ ಸಂದರ್ಭದಲ್ಲಿ ಪ್ರಾಣದ ಹಂಗನ್ನು ತೊರೆದು ಜನರ ಜೀವಗಳನ್ನು ರಕ್ಷಿಸುವಲ್ಲಿ ವೈದ್ಯರು, ದಾದಿಯರು ಸೇರಿದಂತೆ ವೈದ್ಯಕೀಯ ವಿಭಾಗದ ಎಲ್ಲರೂ ಅಭಿನಂದನಾರ್ಹರು. ಅವರನ್ನು ಗುರುತಿಸಿ ಸನ್ಮಾನಿಸುವುದು ಸಂಘ ಸಂಸ್ಥೆಗಳ ಕರ್ತವ್ಯ ಎಂದು ಪ್ರಜಾಭೂಷಣ ಪ್ರಶಸ್ತಿ ಪುರಸ್ಕøತ ಸಮಾಜ ಸೇವಕ ಚಿನಕುರಳಿ ಪ್ರದೀಪ್ ಹೇಳಿದರು.
ಸಾಹಸ ಸಿಂಹ ದಿ.ಡಾ.ವಿಷ್ಣುವರ್ಧನ್ ಜನ್ಮದಿನಾಚರಣೆ ಪ್ರಯುಕ್ತ ಪಾಂಡವಪುರದ ವಿಷ್ಣುಸೇನಾ ಸಮಿತಿಯವರು ತಾಲ್ಲೂಕಿನ ದೊಡ್ಡ ಬ್ಯಾಡರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕರೋನಾ ವಾರಿಯರ್ಸ್‍ಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತು ಕಂಡು ಕೇಳರಿಯದ ಕರೊನಾವನ್ನು ನಮ್ಮ ವೈದ್ಯಕೀಯ ಸಿಬ್ಬಂದಿಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಸಹಜವಾಗಿ ಸಾವನ್ನಪ್ಪಿದ್ದು, ವೈದ್ಯಕೀಯ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗುತೊರೆದು ಕೊಟ್ಯಾಂತರ ಜನರ ಪ್ರಾಣವನ್ನೂ ಸಹ ಉಳಿಸಿದ್ದಾರೆ. ಈ ನಿಟ್ಟಿನಲ್ಲಿ ಆಂಬುಲೆನ್ಸ್ ಚಾಲಕರು ಮತ್ತು ಆಸ್ಪತ್ರೆಯ ಡಿ ಗ್ರೂಪ್ ನೌಕರರ ಸೇವೆ ಅನನ್ಯವಾಗಿದೆ. ಪಾಂಡವಪುರ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರಾದ ಎಂ.ಆನಂದ್ ಮತ್ತು ಅವರ ಪತ್ನಿ ಆಸ್ಪತ್ರೆಯ ಡಿ ಗ್ರೂಪ್ ನೌಕರರಾದ ಅಶ್ವಿನಿ ದಂಪತಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಸೇವೆಯಲ್ಲಿ ತೊಡಗಿರುವುದು ನಾವೆಲ್ಲಾ ಕಂಡಿದ್ದೇವೆ. ಇದರಿಂದ ಅವರು ಅಭಿನಂದನಾರ್ಹರು ಎಂದು ಶ್ಲಾಘಿಸಿದರಲ್ಲದೇ ದಂಪತಿಗಳನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅವರನ್ನೂ ಸಹ ಸನ್ಮಾನಿಸಲಾಯಿತು. 
ಕಾರ್ಯಕ್ರಮಕ್ಕೂ ಮುನ್ನ ನಡೆದ ರಕ್ತದಾನ ಶಿಬಿರವನ್ನು ಸಮಾಜ ಸೇವಕ ಬಂಡಿಪಾಳ್ಯ ಗಿರೀಶ್ ಉದ್ಘಾಟಿಸಿದರು. 
ವಿಷ್ಣು ಸೇವಾ ಸಮಿತಿಯ ಜಿಲ್ಲಾ ಸಂಘಟಕರಾದ ಹಿರೇಮರಳಿ ವಿಷ್ಣು ವಿಠಲ್, ಶಿವಕುಮಾರ್. ಬಳಗಟ್ಟ ಮಹದೇವ್. ಬೇವಿನಕುಪ್ಪೆ ವರುಣ್ ಗ್ರಾಮಸ್ಥರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು