ಉದ್ಯೋಗಕ್ಕೆ ಲಂಚ ಮಾತುಕತೆ : ಪಿಎಸ್‍ಐ ಅಶ್ವಿನಿ ಸಸ್ಪೆಂಡ್


 ಮೈಸೂರು : ಎಸ್‍ಡಿಎ, ಎಫ್‍ಡಿಎ, ಪಿಎಸ್‍ಐ ಮತ್ತಿತರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಮೈಸೂರು ನಗರ ಎನ್‍ಆರ್ ಸಂಚಾರ ವಿಭಾಗದ ಪಿಎಸ್‍ಐ ಅಶ್ವಿನಿ ಅನಂತಪುರ ಅವರನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ನೇಮಕಾತಿ ವಿಚಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಪಿಎಸ್‍ಐ ಅಶ್ವಿನಿ ಅನಂತು ಉದ್ಯೋಗ ಆಕಾಂಕ್ಷಿಯೊಂದಿಗೆ ಹಣಕಾಸಿನ ವಿಚಾರವಾಗಿ ಮಾತನಾಡಿರುವ ಆಡಿಯೋ ಮತ್ತು ಆರ್‍ಟಿಜಿಎಸ್ ಮೂಲಕ ಹಣ ಪಡೆದಿರುವ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಶನಿವಾರ ದಾಖಲೆ ಬಿಡುಗಡೆ ಮಾಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ವಿಚಾರಣೆಗೆ ಆದೇಶಿಸಿ ತಕ್ಷಣವೇ ಜಾರಿಗೆ ಬರುವಂತೆ ಅಮಾನತ್ತು ಮಾಡಿದ್ದಾರೆ.

ಬಾಗಲಕೋಟೆ ಮೂಲದ ಸಂಗಮೇಶ್ ಝಳಕಿ ಎಂಬುವವರೊಂದಿಗೆ ಎಸ್‍ಡಿಎ, ಎಫ್‍ಡಿಎ, ಕೆಎಂಎಫ್, ಪಿಎಸ್‍ಐ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಿರುವ ವ್ಯವಹಾರದ ಆಡಿಯೋ ಸಂಭಾಷಣೆ ಮತ್ತು ಬ್ಯಾಂಕ್‍ಗೆ ವರ್ಗಾವಣೆಯಾಗಿರುವ ಹಣ ವಾಟ್ಸಾಪ್ ಚಾಂಟಿಂಗ್ ಸಮೇತ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಮಾಧ್ಯಮದ ಮೂಲಕ ದಾಖಲೆ ಬಿಡುಗಡೆ ಮಾಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು