ಹನೂರು ಸೆಸ್ಕ್ ಎಇಇ ಶಂಕರ್ ಭರವಸೆ
ವರದಿ-ಹನೂರು ಶಾರೂಖ್ ಖಾನ್
ಹನೂರು : ಟಿಸಿ ಸೇರಿದಂತೆ ಇನ್ನಿತರ ಸೆಸ್ಕಾಂ ಇಲಾಖೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ರೈತರು ಮಾಹಿತಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಹನೂರು ಸೆಸ್ಕಾಂ ಎಇಇ ಶಂಕರ್ ತಿಳಿಸಿದರು.
ಹನೂರು : ಟಿಸಿ ಸೇರಿದಂತೆ ಇನ್ನಿತರ ಸೆಸ್ಕಾಂ ಇಲಾಖೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ರೈತರು ಮಾಹಿತಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಹನೂರು ಸೆಸ್ಕಾಂ ಎಇಇ ಶಂಕರ್ ತಿಳಿಸಿದರು.
ಹನೂರು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿ, ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೋರ್(ಬಾವಿ)ವಿದ್ಯುತ್ ಬಿಲ್ ಪಾವತಿ ವಿಳಂಬ ಆಗುತ್ತಿದೆ. ವಿದ್ಯುತ್ ದುರ್ಬಳಕೆ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. 105 ಟಿಸಿ ಅಳವಡಿಸಲಾಗಿದ್ದು, ಕಾಡಂಚಿನ ಗ್ರಾಮಗಳಲ್ಲಿ ಟಿಸಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈಗಾಗಲೇ ಅನುದಾನ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ರೈತರ ದೂರು ಆಲಿಸಿ ಅದನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು ಅದರಂತೆಯೇ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಹನೂರು ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ಪರಿವರ್ತಕ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕಾರವಾಗುತ್ತಿಲ್ಲ. 63ಕೆವಿ ವಿದ್ಯುತ್ ಸಮಸ್ಯೆ, ಟಿಸಿ ಬಳಿ ಗಿಡಗಂಟಿ ತೆರವುಗೊಳಿಸಬೇಕು ಎಂದು ರೈತ ಮುಖಂಡರಾದ ಬೊಮ್ಮೇಗೌಡ, ಕೆ.ವಿ.ಸಿದ್ದಪ್ಪ, ಮಣಿಗಾರ್ ಪ್ರಸಾದ್ ಒತ್ತಾಯಿಸಿದರು.ಸಭೆಯಲ್ಲಿ ಸೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ರಂಗಸ್ವಾಮಿ, ರಾಜು ಮತ್ತಿತರಿದ್ದರು.
ಹನೂರು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿ, ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೋರ್(ಬಾವಿ)ವಿದ್ಯುತ್ ಬಿಲ್ ಪಾವತಿ ವಿಳಂಬ ಆಗುತ್ತಿದೆ. ವಿದ್ಯುತ್ ದುರ್ಬಳಕೆ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. 105 ಟಿಸಿ ಅಳವಡಿಸಲಾಗಿದ್ದು, ಕಾಡಂಚಿನ ಗ್ರಾಮಗಳಲ್ಲಿ ಟಿಸಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈಗಾಗಲೇ ಅನುದಾನ ಬಿಡುಗಡೆ ಆಗಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ರೈತರ ದೂರು ಆಲಿಸಿ ಅದನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು ಅದರಂತೆಯೇ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಹನೂರು ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ಪರಿವರ್ತಕ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕಾರವಾಗುತ್ತಿಲ್ಲ. 63ಕೆವಿ ವಿದ್ಯುತ್ ಸಮಸ್ಯೆ, ಟಿಸಿ ಬಳಿ ಗಿಡಗಂಟಿ ತೆರವುಗೊಳಿಸಬೇಕು ಎಂದು ರೈತ ಮುಖಂಡರಾದ ಬೊಮ್ಮೇಗೌಡ, ಕೆ.ವಿ.ಸಿದ್ದಪ್ಪ, ಮಣಿಗಾರ್ ಪ್ರಸಾದ್ ಒತ್ತಾಯಿಸಿದರು.
ಸಭೆಯಲ್ಲಿ ಸೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ರಂಗಸ್ವಾಮಿ, ರಾಜು ಮತ್ತಿತರಿದ್ದರು.
0 ಕಾಮೆಂಟ್‌ಗಳು