ಅಕ್ರಮ ಶ್ರೀಗಂಧ ಸಂಗ್ರಹ : ಒಬ್ಬನ ಬಂಧನ ೫೦ ಕೆಜಿ ಶ್ರೀಗಂಧದ ತುಂಡುಗಳು ವಶ

ಮೈಸೂರು : ನಗರದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಉದಯಗಿರಿ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದ ಮನೆಯೊಂದರಲ್ಲಿ ಕಾನೂನು ಬಾಹಿರವಾಗಿ ಅಡಗಿಸಿಟ್ಟಿದ್ದ ೫೦ ಕೆಜಿ ತೂಕದ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದಾರೆ.
ಕೆಲವು ವ್ಯಕ್ತಇಗಳು ಕಳ್ಳತನ ಮಾಡಿ ಈ ಮರದ ತುಂಡುಗಳನ್ನು ಬಂಧಿತನಿಗೆ ಮಾರಾಟ ಮಾಡಿದ್ದು, ಬಂಧಿತನೂ ಬೇರೊಬ್ಬರಿಗೆ ಮಾರಲು ಸಿದ್ಧತೆ ನಡೆಸಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.
ಡಿಸಿಪಿ ಎಂ.ಎಸ್.ಗೀತ, ಸಿಸಿಬಿ ಎಸಿಪಿ ಸಿ.ಕೆ.ಅಶ್ವಥನಾರಾಯಣ  ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎ.ಮಲ್ಲೇಶ್ ಸಿಬ್ಬಂದಿಗಳಾದ ಜೋಸೆಫ್ ನೊರೋನ್ಹ, ಜರ್ನಾಧನ್ ರಾವ್, ಶ್ರೀನಿವಾಸ್ ಪ್ರಸಾದ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.