ಮೈಸೂರು : ಕೆಆರ್‌ಐಡಿಎಲ್ ಕಾರ್ಯಪಾಲಕ ಅಭಿಯಂತರರಾದ ಕೆ.ಶೋಭ ಅವರು, ತಮ್ಮ ಸ್ವಂತ ಇಲಾಖೆ ಸೇರಿದಂತೆ ವಿವಿಧ ಕಡೆ ನಡೆಸಿರುವ ಕಾಮಗಾರಿಗಳಲ್ಲಿ ಸುಮಾರು ೬೦ ಲಕ್ಷ ರೂ ಭ್ರಷ್ಟಾಚಾರ ನಡೆಸಿದ್ದಾರೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಸೋಮವಾರ ಬೆಳಗ್ಗೆ ಆಲನಹಳ್ಳಿ ಬಡಾವಣೆಯಲ್ಲಿರುವ ಕೆಆರ್‌ಐಡಿಎಲ್ ಕಚೇರಿ ಎದುರು ಕರವೇ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಡಾ.ಎಂ.ಲಿಂಗರಾಜು ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೆಆರ್‌ಐಡಿಎಲ್ ಇಇ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ.ಎಂ.ಲಿಂಗರಾಜು ಮಾತನಾಡಿ, ಕೆ.ಆರ್.ಐ.ಡಿ.ಎಲ್ ಮೈಸೂರು ಕಚೇರಿ ರಿಪೇರಿ ಕೆಲಸಕ್ಕೆ ಬಿಡುಗಡೆ ಆಗಿದ್ದ ಸರ್ಕಾರಿ ಹಣವನ್ನು ಎಇಇ ಕೆ.ಶೋಭಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಸೇವೆಯಿಂದ ವಜಾ ಮಾಡಬೇಕು, ಅವರ ವಿರುದ್ಧ ತನಿಖೆ ಕೈಗೊಂಡು ದುರುಪಯೋಗ ಆಗಿರುವ ಹಣವನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮಲ್ಲೇಶ್,ಪ್ರಧಾನ ಕಾರ್ಯದರ್ಶಿ ಚರಣ್ ರಾಜ್, ಖಜಾಂಚಿ ಮಹದೇವಸ್ವಾಮಿ, ಸಂಚಾಲಕರಾದ ಕರಿಯಪ್ಪ, ಮಹದೇವ್, ಪ್ರಕಾಶ್, ಮಹೇಶ್, ರವಿ ಪ್ರಕಾಶ್, ರವಿ ಕುಮಾರ್, ರವಿ ಕಿರಣ್, ಸೋಮಣ್ಣ, ಶಿವಣ್ಣ, ಗುರುಸ್ವಾಮಿ, ಗಗನ, ಪುಟ್ಟತಾಯಮ್ಮ, ಉಷಾ, ಬಸವರಾಜು ಮತ್ತಿತರರು ಇದ್ದರು.
