ಮೈಸೂರಿನ ಕುವೆಂಪು ನಗರದಲ್ಲಿ 7ನೇ ಮಳಿಗೆ ತೆರೆದ ಕಲಾಮಂದಿರ್ : ಒಂದೇ ಸೂರಿನಡಿ ಇಡೀ ಕುಟುಂಬದ ಸಮಗ್ರ ಶಾಪಿಂಗ್ ತಾಣ

ನಿಷ್ಕಲ ಎಸ್., ಮೈಸೂರು

ಮೈಸೂರು : ಕರ್ನಾಟಕದ ವಿಶ್ವಾಸಾರ್ಹ ಫ್ಯಾಷನ್ ಬ್ರಾ÷್ಯಂಡ್ ಕಲಾಮಂದಿರ್ ಮೈಸೂರಿನ ಕುವೆಂಪು ನಗರದಲ್ಲಿ ತನ್ನ ನೂತನ ಶೋರೂಂ ಆರಂಭಿಸಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಶೋರೂಂ ಉದ್ಘಾಟಿಸಿದರು.

ಈ ಹೊಸ ಶೋರೂಂ ಮೈಸೂರಿನಲ್ಲಿ ಕಲಾಮಂದಿರ್‌ನ 7ನೇ ಮಳಿಗೆಯಾಗಿದ್ದು, ನಗರದ ಗ್ರಾಹಕರಿಗೆ ಗುಣಮಟ್ಟದ ಹಾಗೂ ಸಮಕಾಲೀನ ಫ್ಯಾಷನ್ ಟ್ರೆಂಡ್‌ಗಳನ್ನು ಅತ್ಯಂತ ಸುಲಭವಾಗಿ ತಲುಪಿಸುವ ಉದ್ದೇಶ ಹೊಂದಿದೆ. ಈಗಾಗಲೇ ಸಾಂಸ್ಕöÈತಿಕ ನಗರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಳಿಗೆಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈ ಹೊಸ ಶೋರೂಂ ಆರಂಭಿಸಲಾಗಿದೆ. ಎಲ್ಲಾ ವಯೋಮಾನದ ಗ್ರಾಹಕರಿಗೆ ಹಾಗೂ ವಿವಿಧ ಶುಭ ಸಮಾರಂಭಗಳಿಗೆ ಸೂಕ್ತವಾದ ವೈವಿಧ್ಯಮಯ ಫ್ಯಾಷನ್ ಉಡುಪುಗಳ ವಿಶಾಲ ಸಂಗ್ರಹವನ್ನು ಈ ಮಳಿಗೆ ಹೊಂದಿದ್ದು, ಆಧುನಿಕ ಶಾಪಿಂಗ್ ಅನುಭವವನ್ನು ಒದಗಿಸುತ್ತದೆ.

ಗ್ರಾಹಕರಿಗೆ ಸುಗಮ, ವಿಶಾಲ ಹಾಗೂ ಆರಾಮದಾಯಕ ಶಾಪಿಂಗ್ ಅನುಭವ ದೊರೆಯುವಂತೆ ಬಹುಮಹಡಿಗಳಲ್ಲಿ ವಿಸ್ತರಿಸಿರುವ ಈ ಶೋರೂಂ ವಿನ್ಯಾಸಗೊಳಿಸಲಾಗಿದೆ. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಎಥ್ನಿಕ್ ವೇರ್, ಫಾರ್ಮಲ್ ವೇರ್, ಕ್ಯಾಶುಯಲ್ ವೇರ್, ಹಬ್ಬದ ಉಡುಪುಗಳು, ಪಾರ್ಟಿ ವೇರ್ ಸೇರಿದಂತೆ ಸಮಕಾಲೀನ ಫ್ಯಾಷನ್ ಉಡುಪುಗಳ ವಿಶಾಲ ಸಂಗ್ರಹ ಇಲ್ಲಿ ಲಭ್ಯವಿದೆ. ಗುಣಮಟ್ಟದ ಉಡುಪುಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವ ಮೂಲಕ ಇಡೀ ಕುಟುಂಬದ ಶಾಪಿಂಗ್‌ಗೆ ಸೂಕ್ತ ತಾಣವಾಗಿ ಕಲಾಮಂದಿರ್ ರೂಪುಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಸ್‌ಕೆಎಲ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸಾದ್ ಚಾಲವಾಡಿ ಅವರು, "ಪ್ರತಿ ಕುಟುಂಬಕ್ಕೂ ಗುಣಮಟ್ಟದ, ಆಧುನಿಕ ಹಾಗೂ ಕೈಗೆಟುಕುವ ಬೆಲೆಯ ಫ್ಯಾಷನ್ ಒದಗಿಸಬೇಕು ಎಂಬ ಉದ್ದೇಶದಿಂದಲೇ ಕಲಾಮಂದಿರ್ ಬೆಳೆಯುತ್ತಿದೆ. ಮೈಸೂರಿನಲ್ಲಿ ನಮ್ಮ 7ನೇ ಮಳಿಗೆ ಆರಂಭಿಸಿರುವುದು ಹೆಮ್ಮೆಯ ಕ್ಷಣವಾಗಿದ್ದು, ವರ್ಷಗಳಿಂದ ನಮ್ಮ ಮೇಲೆ ಗ್ರಾಹಕರು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ. ಮುಂದೆಯೂ ಅತ್ಯಾಧುನಿಕ ಫ್ಯಾಷನ್ ಸಂಗ್ರಹ, ಅತ್ಯುತ್ತಮ ಮೌಲ್ಯ ಹಾಗೂ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಪ್ರತಿಯೊಂದು ಕುಟುಂಬಕ್ಕೂ ತಲುಪಿಸಲು ನಾವು ಬದ್ಧರಾಗಿದ್ದೇವೆ" ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಸ್‌ಕೆಎಲ್ ನಿರ್ದೇಶಕರಾದ ದುರ್ಗಾರಾವ್ ಚಾಲವಾಡಿ ಕಲಾಮಂದಿರ್‌ಗೆ ಮೈಸೂರು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಇಲ್ಲಿನ ಗ್ರಾಹಕರಿಂದ ದೊರೆತ ಉತ್ತಮ ಸ್ಪಂದನೆಯೇ ನಗರದಲ್ಲಿ ಮತ್ತಷ್ಟು ವಿಸ್ತರಣೆಗೆ ಪ್ರೇರಣೆಯಾಗಿದೆ. ಕುವೆಂಪು ನಗರದ ಈ ಹೊಸ ಶೋರೂಂ ಸಂಪೂರ್ಣ ಫ್ಯಾಮಿಲಿ ಶಾಪಿಂಗ್ ಎಕ್ಸ್ಪಿರಿಯನ್ಸ್ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಆಯ್ಕೆ, ಆರಾಮದಾಯಕ ವಾತಾವರಣ ಹಾಗೂ ಗುಣಮಟ್ಟದ ಸೇವೆಯೊಂದಿಗೆ ಇನ್ನಷ್ಟು ಕುಟುಂಬಗಳನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ," ಎಂದು ತಿಳಿಸಿದರು.

ಮೈಸೂರಿನಲ್ಲಿ ತನ್ನ 7ನೇ ಮಳಿಗೆಯನ್ನು ಆರಂಭಿಸುವ ಮೂಲಕ ಕಲಾಮಂದಿರ್, ಗುಣಮಟ್ಟ, ವೈವಿಧ್ಯತೆ, ಕೈಗೆಟುಕುವ ಬೆಲೆ ಹಾಗೂ ಗ್ರಾಹಕರ ತೃಪ್ತಿಗೆ ಆದ್ಯತೆ ನೀಡುವ ಕರ್ನಾಟಕದ ಪ್ರಮುಖ ಫ್ಯಾಮಿಲಿ ಫ್ಯಾಷನ್ ರಿಟೇಲ್ ಬ್ರಾ÷್ಯಂಡ್ ಎಂಬ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.