ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಭಾಗದ ಸಾರ್ವಜನಿಕರಿಗೆ ಸುಧಾರಿತ ಜೀರ್ಣಾಂಗ ಮತ್ತು ಗ್ಯಾಸ್ಟೊçÃಇಂಟೆಸ್ಟೆöÊನಲ್ (ಜಿಐ) ಕ್ಯಾನ್ಸರ್ ಚಿಕಿತ್ಸೆಯನ್ನು ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ ಅತ್ಯಾಧುನಿಕ ನಾರಾಯಣ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಡೈಜೆಸ್ಟಿವ್ ಆಂಡ್ ಜಿಐ ಆಂಕಾಲಜಿ (ಜೀರ್ಣಾಂಗ ಮತ್ತು ಜಿಐ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ) ಕೇಂದ್ರವನ್ನು ಅದ್ದೂರಿಯಾಗಿ ಉದ್ಘಾಟಿಸಲಾಗಿದೆ ಎಂದು ವೈದ್ಯಕೀಯ ಸೇವೆಗಳ ಮುಖ್ಯಸ್ಥರಾದ ಡಾ.ಅಶೋಕ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ನೂತನ ಕೇಂದ್ರವು ಮೆಡಿಕಲ್ ಗ್ಯಾಸ್ಟೊçÃಎಂಟರಾಲಜಿ, ಸರ್ಜಿಕಲ್ ಗ್ಯಾಸ್ಟೊçÃಎಂಟರಾಲಜಿ ಹಾಗೂ ಆಂಕಾಲಜಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಿದೆ ಎಂದರು.
ಹಿರಿಯ ಗ್ಯಾಸ್ಟೊçÃಎಂಟರಾಲಜಿ ಕನ್ಸಲ್ಟೆಂಟ್ ಡಾ.ನಂದೀಶ್ ಹೆಚ್.ಪಿ., ಅವರು ಮಾತನಾಡಿ, ಭಾರತದಾದ್ಯಂತ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು ಮತ್ತು ಜಿಐ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟಿç ಪ್ರೋಗ್ರಾಂ (ಎನ್‌ಸಿಆರ್‌ಪಿ) ಅಂದಾಜಿನ ಆಧಾರದ ಮೇಲೆ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ದತ್ತಾಂಶಗಳ ಪ್ರಕಾರ, ಭಾರತದಲ್ಲಿ ಅಂದಾಜಿಸಲಾದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಹೆಚ್ಚುತ್ತಿದ್ದು, 2025ರ ವೇಳೆಗೆ ಪ್ರಕರಣಗಳ ಸಂಖ್ಯೆ ಸುಮಾರು 15.7 ಲಕ್ಷ ತಲುಪಿದೆ. ಭಾರತದ ಒಟ್ಟಾರೆ ಕ್ಯಾನ್ಸರ್ ಹೊರೆಯಲ್ಲಿ ಕರ್ನಾಟಕವೊಂದೇ ಸರಿಸುಮಾರು 6.2% ರಷ್ಟು ಕೊಡುಗೆ ನೀಡುತ್ತಿದ್ದು, ಎಲ್ಲಾ ರಾಜ್ಯಗಳ ಪೈಕಿ ಏಳನೇ ಸ್ಥಾನದಲ್ಲಿದೆ. ರಾಜ್ಯದ ರಿಜಿಸ್ಟಿçಯಲ್ಲಿ ದಾಖಲಾದ ಒಟ್ಟು ಕ್ಯಾನ್ಸರ್ ಪ್ರಕರಣಗಳ ಪೈಕಿ ಗ್ಯಾಸ್ಟೊçÃಇಂಟೆಸ್ಟೆöÊನಲ್ (ಜೀರ್ಣಾಂಗ ವ್ಯೂಹದ) ಕ್ಯಾನ್ಸರ್ ಪ್ರಕರಣಗಳು ಸುಮಾರು 19.7% ರಷ್ಟಿವೆ. ಆರೋಗ್ಯ ರಕ್ಷಣಾ ತಜ್ಞರು ಯುವ ಜನರಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದಾರೆ. ಇದರೊಂದಿಗೆ, ತಪಾಸಣೆ ತಡವಾಗುವುದು ಮತ್ತು ಆಸಿಡಿಟಿ ಹಾಗೂ ಜೀರ್ಣಕ್ರಿಯೆಯ ಲಕ್ಷಣಗಳಿಗೆ ದೀರ್ಘಕಾಲದವರೆಗೆ ಸ್ವಯಂ-ಔಷಧಿ ಮಾಡಿಕೊಳ್ಳುವುದರಿಂದಾಗಿ, ಗ್ಯಾಸ್ಟೊçÃಇಂಟೆಸ್ಟೆöÊನಲ್ ಕ್ಯಾನ್ಸರ್‌ಗಳು ಅಂತಿಮ ಹಂತಗಳಲ್ಲಿ ಪತ್ತೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಇದೀಗ ನೂತನವಾಗಿ ಪ್ರಾರಂಭಿಸಲಾದ ಈ ಕೇಂದ್ರವನ್ನು ಕ್ಷಿಪ್ರ ರೋಗನಿರ್ಣಯ, ಬಹುಶಿಸ್ತೀಯ ಚಿಕಿತ್ಸಾ ಯೋಜನೆ ಮತ್ತು 24 ಗಂಟೆಗಳ ತುರ್ತು ನಿಗಾ ಬೆಂಬಲದ ಮೂಲಕ ಪ್ರಸ್ತುತ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕೇಂದ್ರದಲ್ಲಿ ಇಆರ್‌ಸಿಪಿಮತ್ತು ಇಯುಎಸ್ ಒಳಗೊಂಡAತೆ ಸುಧಾರಿತ ಎಂಡೋಸ್ಕೋಪಿ ಪ್ರಕ್ರಿಯೆಗಳು, ಪ್ರತ್ಯೇಕ ಸಿಯು ಮತ್ತು ತುರ್ತು ಶಸ್ತçಚಿಕಿತ್ಸಾ ಕೊಠಡಿ ಸೌಲಭ್ಯಗಳ ಜೊತೆಗೆ ಸಿಟಿ ಮತ್ತು ಎಂಆರ್‌ಐ ಸೇವೆಗಳನ್ನೊಳಗೊಂಡ ಸುಧಾರಿತ ಇಮೇಜಿಂಗ್ ಕೇಂದ್ರವನ್ನೂ ಒದಗಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಆದ ಪವನ್ ಕುಮಾರ್ ಪರಮಾತ್ಮುನಿ ಅವರು, "ಜೀರ್ಣಾಂಗ ಸಂಬAಧಿತ ಚಿಕಿತ್ಸೆಗಾಗಿ ಮೈಸೂರು ಭಾಗದ ಅನೇಕ ರೋಗಿಗಳು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಆದರೆ ಇಂದು, ನಾವು ಮೈಸೂರಿನಲ್ಲಿಯೇ 24/7 ಮಲ್ಟಿಸ್ಪೆಷಾಲಿಟಿ ಚಿಕಿತ್ಸಾ ಕೇಂದ್ರದ ಮೂಲಕ ಒಂದೇ ಸೂರಿನಡಿ ಸಂಪೂರ್ಣ ಜೀರ್ಣಾಂಗ ಮತ್ತು ಜಿಐ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದೇವೆ. ಈ ಭಾಗದ ರೋಗಿಗಳಿಗೆ ಸಕಾಲದಲ್ಲಿ ರೋಗನಿರ್ಣಯ, ಕ್ಷಿಪ್ರ ಚಿಕಿತ್ಸೆ ಮತ್ತು ಉತ್ತಮ ಫಲಿತಾಂಶಗಳನ್ನು ಒದಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ," ಎಂದು ತಿಳಿಸಿದರು.
ಸರ್ಜಿಕಲ್ ಆಂಕಾಲಜಿ ಕನ್ಸಲ್ಟೆಂಟ್ ಡಾ.ಸುಹಾಸ್ ಕೆ.ಆರ್., ಅವರು ಮಾತನಾಡಿ, "ಜೀರ್ಣಾಂಗ ಸಂಬAಧಿತ ಕಾಯಿಲೆಗಳು ಮತ್ತು ಜಿಐ ಕ್ಯಾನ್ಸರ್‌ಗಳಿಗೆ ಸಕಾಲಿಕ ರೋಗನಿರ್ಣಯ ಹಾಗೂ ಸಂಯೋಜಿತ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ಕೇಂದ್ರವನ್ನು ಪ್ರಾರಂಭಿಸುವುದರ ಮೂಲಕ, ರೋಗಿಗಳು ಈಗ ಸುಧಾರಿತ ಗ್ಯಾಸ್ಟೊçÃಎಂಟರಾಲಜಿ, ಜಿಐ ಸರ್ಜರಿ ಮತ್ತು ಆಂಕಾಲಜಿ ತಜ್ಞರ ಸೇವೆಗಳನ್ನು ಒಂದೇ ಸೂರಿನಡಿ ಪಡೆಯಬಹುದು. ಆರಂಭಿಕ ಪತ್ತೆ, ಕ್ಷಿಪ್ರ ಚಿಕಿತ್ಸೆ ಮತ್ತು ಸಮಗ್ರ ಆರೈಕೆಯ ಮೇಲೆ ನಾವು ಗಮನ ಹರಿಸಲಿದ್ದು, ಇದು ರೋಗಿಗಳ ದೀರ್ಘಕಾಲೀನ ಆರೋಗ್ಯ ಫಲಿತಾಂಶಗಳನ್ನು ಉತ್ತಮಗೊಳಿಸುತ್ತದೆ," ಎಂದರು.
ಹಿರಿಯ ಗ್ಯಾಸ್ಟೊçÃಎಂಟರಾಲಜಿ ಕನ್ಸಲ್ಟೆಂಟ್ ಡಾ.ರೋಹನ್ ಎನ್.ಯು., ಗ್ಯಾಸ್ಟೊçÃಎಂಟರಾಲಜಿ ಕನ್ಸಲ್ಟೆಂಟ್ ಡಾ. ದೇವರಾಜ ಆರ್, ಕನ್ಸಲ್ಟೆಂಟ್ - ಹೆಪಟಾಲಜಿಸ್ಟ್ ಮತ್ತು ವೈದ್ಯಕೀಯ ಗ್ಯಾಸ್ಟೊçÃಎಂಟರಾಲಜಿಸ್ಟ್ ಡಾ. ಸುಹಾಸ್ ಕೆ.ಆರ್., ಮತ್ತು ಮೆಡಿಕಲ್ ಆಂಕಾಲಜಿ ಕನ್ಸಲ್ಟೆಂಟ್ ಡಾ. ಲೇಪಾಕ್ಷಿ ಕೆ., ಅವರುಗಳು ಮಾತನಾಡಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳು, ಕಾಯಿಲೆಗಳ ಗಂಭೀರತೆ, ತಕ್ಷಣ ಪರೀಕ್ಷಗೆ ಒಳಗಾದಲ್ಲಿ ಪ್ರಾಣಾಪಾಯ ಕಡಿಮೆ ಎನ್ನುವುದರ ಬಗ್ಗೆ ಮತ್ತು ಆಸ್ಪತ್ರೆಯಲ್ಲಿ ದೊರೆಯುವ ವಿಮಾ ಸೌಲಭ್ಯಗಳ ಬಗ್ಗೆ ಸುದೀರ್ಘವಾಗಿ ವಿವರಣೆ ನೀಡಿದರು.

